ಮಂಗಳೂರು: ಗಣಿ-ಭೂ ವಿಜ್ಞಾನ ಇಲಾಖೆ ಅಭಿಯಂತರರ ಮನೆಗೆ ಎಸಿಬಿ ದಾಳಿ
ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇರೆಗೆ ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರರ ಮಂಗಳೂರು, ಬೆಂಗಳೂರು, ಚಿತ್ರದುರ್ಗದ ಮನೆ ಹಾಗೂ ಕಚೇರಿಗೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರರಾಗಿ 18 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮಹದೇವಪ್ಪರ ಮಂಗಳೂರಿನ ಕದ್ರಿ ಕಂಬಳದಲ್ಲಿರುವ ಬಾಡಿಗೆ ಮನೆ, ಕದ್ರಿ ಮಲ್ಲಿಕಟ್ಟೆ ಯಲ್ಲಿರುವ ಕಚೇರಿಗೆ ದಾಳಿ ನಡೆಸಲಾಗಿದೆ. ಜತೆಗೆ ಬೆಂಗಳೂರಿನ ಸಿದ್ದೇನಹಳ್ಳಿಯಲ್ಲಿರುವ ಮನೆ ಹಾಗೂ […]