ಮಂಗಳೂರು ವಿಶ್ಯವಿದ್ಯಾನಿಲಯದ ಪದವಿಪೂರ್ವ ಪಠ್ಯಕ್ರಮದಲ್ಲಿ ಪ್ರಾದೇಶಿಕ ಇತಿಹಾಸ ಸೇರ್ಪಡೆ

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಅಂಗವಾಗಿ ದೇಶಾದ್ಯಂತ ಸ್ಥಳೀಯ ಇತಿಹಾಸ ಮತ್ತು ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಪ.ಪೂ ಪಠ್ಯಕ್ರಮದಲ್ಲಿ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿಯ ಸ್ಥಳಿಯ ಇತಿಹಾಸವನ್ನು ಸೇರಿಸಲಾಗಿಲ್ಲ ಎನ್ನುವ ಪುಕಾರು ಎದ್ದಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುತ್ತಿದ್ದರೂ ಇಲ್ಲಿನ ಸ್ಥಳೀಯ ಇತಿಹಾಸವನ್ನು ಪಠ್ಯದೊಳಗೆ ಸೇರಿಸಲಾಗಿಲ್ಲ. ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಯದಿಂದಾಗಿ ಪದವಿಪೂರ್ವ ಹಂತದಲ್ಲಿ ಸ್ಥಳೀಯ ಇತಿಹಾಸವನ್ನು […]

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಜ್ರಮಹೋತ್ಸವದ ಅಂಗವಾಗಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಕುಂದಾಪುರ: ವಿದ್ಯೆ ಮತ್ತು ಬುದ್ಧಿ ಒಂದೆ ಗಾಡಿಯ ಎರಡು ಚಕ್ರಗಳಿದ್ದಂತೆ, ಒಂದನ್ನು ಇನ್ನೊಂದು ಅನುಸರಿಸಿ ಸಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ಡಾ.ಪಿ.ಎಸ್ ಯಡಪಡಿತ್ತಾಯ ಅಭಿಪ್ರಾಯಪಟ್ಟರು. ಅವರು ಆಗಸ್ಟ್ 13 ರಂದು ಭಂಡಾರ್ಕಾರ್ಸ್ ಕಾಲೇಜಿನ ವಜ್ರಮಹೋತ್ಸವ, ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಡಾ.ಹೆಚ್. ಶಾಂತಾರಾಮ್ ಅವರ 95ನೇ ಹುಟ್ಟು ಹಬ್ಬದ ಆಚರಣೆಯ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಒಳಗಿನ ಕಣ್ಣನ್ನು ತೆರೆದು ಯೋಚಿಸಬೇಕು. ಅಹಂಕಾರ ಸಲ್ಲದು. ಮುಖ್ಯವಾಗಿ ತಾಳ್ಮೆ, ಸಕಾರಾತ್ಮಕತೆ ಮತ್ತು ಸ್ವಶಿಸ್ತು ಅತ್ಯಂತ […]

ಮಂಗಳೂರು: ಜುಲೈ 3 ರಂದು ರವೀಂದ್ರ ಕಲಾ ಭವನದಲ್ಲಿ ಸರೋದ್ ವಾದನ ಕಾರ್ಯಕ್ರಮ

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನವು ಪ್ರಸ್ತುತ ಪಡಿಸುತ್ತಿರುವ ಸರೋದ್‌ ವಾದನ ಕಾರ್ಯಕ್ರಮವು ಜುಲೈ 3 ರಂದು ಸಂಜೆ 6 ಗಂಟೆಗೆ ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಕೊಲ್ಕತ್ತಾದ ಪಂ.ತೇಜೇಂದ್ರ ನಾರಾಯಣ ಮಜುಮ್‌ದಾರ್‌ ಅವರ ಸರೋದ್‌ ವಾದನಕ್ಕೆ ದೇಶದ ಖ್ಯಾತ ತಬ್ಲಾಪಟು ಮುಂಬೈನ ಪಂ.ಯೋಗೀಶ್ ಸಂಶಿ ಅವರು ತಬ್ಲಾ ಸಾಥ್‌ನೀಡಲಿದ್ದಾರೆ. ಸಂಗೀತಾಸಕ್ತರೆಲ್ಲರಿಗೂ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶಾವಕಾಶವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ […]