ಮಂಗಳೂರು: 9 ವರ್ಷದ ಬಾಲಕ ಸಹಿತ ಕಾರನ್ನು ಹೊತ್ತೊಯ್ದ ಸಂಚಾರಿ ಪೊಲೀಸರು.!
ಮಂಗಳೂರು: 9 ವರ್ಷದ ಬಾಲಕ ಸಹಿತ ಕಾರನ್ನು ಎತ್ತುಕೊಂಡು ಹೋದ (ಟೋಯಿಂಗ್ ) ಘಟನೆ ಮಂಗಳೂರು ನಗರದಲ್ಲಿ ಗುರುವಾರ ನಡೆದಿದೆ. ಮಿಜಾರಿನ ದಿವ್ಯಾ ಅವರ 9 ವರ್ಷದ ಮಗ ಪ್ರಖ್ಯಾತ್ ಹಾಗೂ ಕಾರನ್ನು ಸಂಚಾರಿ ಪೊಲೀಸರು ಟೋಯಿಂಗ್ ಮಾಡಿದ್ದರು. ದಿವ್ಯಾ ಅವರು ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಲ್ಲಿಕಟ್ಟೆಗೆ ಬಂದಿದ್ದರು. ಕಾರನ್ನು ವಸತಿ ಸಮುಚ್ಚಯವೊಂದರ ಪಕ್ಕದಲ್ಲಿ ನಿಲ್ಲಿಸಿ ದಿವ್ಯಾ ಮತ್ತು ಅವರ ಓರ್ವ ಮಗ ಅಂಗಡಿಗೆ ತೆರಳಿದ್ದರು. ಚಾಲಕ ಮತ್ತು ದಿವ್ಯಾ ಅವರ ಕಿರಿಯ ಪುತ್ರ […]