ಮಂಗಳೂರು: ನೂತನ ಪೊಲೀಸ್ ಕಮೀಷನರ್ ಆಗಿ ವಿಕಾಸ್ ಕುಮಾರ್ ಅಧಿಕಾರ ಸ್ವೀಕಾರ 

ಮಂಗಳೂರು: ನಗರದ ನೂತನ ಪೊಲೀಸ್ ಕಮೀಷನರ್ ಆಗಿ ವಿಕಾಸ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮನ ಪೊಲೀಸ್ ಆಯುಕ್ತರಾದ ಡಾ.ಪಿ.ಎಸ್ ಹರ್ಷ ಅವರು ಈಗಾಗಲೇ ವಾರ್ತಾ ಇಲಾಖೆಯ ಆಯುಕ್ತರಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಕಾಸ್ ಕುಮಾರ್ ಅವರು ಹಿಂದೆ ಚಿಕ್ಕಮಂಗಳೂರು ಎಸ್ಪಿಯಾಗಿ, ಆಂತರಿಕ ಭದ್ರತೆ ವಿಭಾಗ, ನಕ್ಸಲ್ ನಿಗ್ರಹದಳದ ಡಿಐಜಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.