ಪಡೀಲ್ ರೈಲು ಹಳಿಯ ಮೇಲೆ ಗುಡ್ಡ ಕುಸಿತ; ತೆರವು ಕಾರ್ಯಾಚರಣೆ
ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಿರಂತರ ಸುರಿದ ಮಳೆ ಹಿನ್ನೆಲೆಯಲ್ಲಿ ಪಡೀಲ್ ರೈಲು ಹಳಿಯ ಮೇಲೆ ಗುಡ್ಡ ಕುಸಿತಗೊಂಡು ಸಮಸ್ಯೆ ಎದುರಾಗಿತ್ತು. ಆದರೆ ಅದರ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ನಡುವೆಯೇ ಮತ್ತೆ ಬುಧವಾರ ಗುಡ್ಡ ಕುಸಿದಿದ್ದು ಕಾರ್ಯಾಚರಣೆಗೆ ತೊಂದರೆಯಾಗಿದೆ. ಈ ಟ್ರಾಕ್ ನಲ್ಲಿ ಆ. 23ರಿಂದಲೇ ಸಂಚಾರ ನಿರ್ಬಂದಿಸಲಾಗಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ಪಕ್ಕದಲ್ಲೇ 400 ಮೀಟರ್ ಉದ್ದದ ಹೆಚ್ಚುವರಿ ಟ್ರಾಕ್ ನಿರ್ಮಿಸುವ ಯೋಜನೆಯನ್ನೂ ಕೈಗೊಳ್ಳಲಾಗಿದೆ.