ಮಂಗಳೂರು: ಯುವಕನ ಮೇಲೆ ತಲವಾರಿನಿಂದ ಮಾರಣಾಂತಿಕ ದಾಳಿ

ಮಂಗಳೂರು: ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ ಘಟನೆ ಮಂಗಳೂರಿನ ಫಳ್ನೀರ್ ನ ಯುನಿಟಿ ಆಸ್ಪತ್ರೆ ಬಳಿ ನಡೆದಿದೆ. ತಲವಾರಿನಿಂದ ದಾಳಿಗೊಳಗಾದ ಯುವಕನನ್ನು ನೌಶಾದ್ (30) ಎಂದು ಗುರುತಿಸಲಾಗಿದೆ. ತಲ್ವಾರ್ ದಾಳಿಯಿಂದ ನೌಶಾದ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪು ನೌಶಾದ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದು, ನೌಶಾದ್ ಎದೆಭಾಗಕ್ಕೆ ಗಾಯವಾಗಿದೆ. ನೌಶಾದ್ ಅವರು ಇತ್ತೀಚೆಗೆ ಕಂದಾವರದಲ್ಲಿ ಮಸೀದಿ ಆಡಳಿತ ವಿಚಾರವಾಗಿ ಹಲ್ಲೆಗೊಳಗಾಗಿದ್ದ ಅಬ್ದುಲ್ ಅಜೀಜ್ ಅವರ ಅಳಿಯ. ನವೆಂಬರ್ […]