ಕಳತ್ತೂರು: ವಿಶ್ವ ಬಂಟರ ಪ್ರತಿಷ್ಠಾನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬಂಟ ಮಹಿಳೆಯರಿಗೆ ಮನೆ ನಿರ್ಮಾಣ

ಕಳತ್ತೂರು: ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಆಡಳಿತ ನಿರ್ದೇಶಕ ಶಶಿಕಿರಣ್ ಶೆಟ್ಟಿ ಇವರು ಮಂಗಳೂರಿನ ಉದ್ಯಮಿ ಎ.ಜೆ.ಶೆಟ್ಟಿ ಅಧ್ಯಕ್ಷತೆಯ ವಿಶ್ವ ಬಂಟರ ಪ್ರತಿಷ್ಠಾನಕ್ಕೆ 8 ಲಕ್ಷ ರೂ ಆರ್ಥಿಕ ಸಹಾಯ ನೀಡಿದ್ದು, ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಬಂಟ ಮಹಿಳೆಯರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಒಟ್ಟು 17 ಮನೆ ನಿರ್ಮಾಣಗೊಂಡಿದ್ದು ಅದರಲ್ಲಿ ಕಾಸರಗೋಡಿನಲ್ಲಿ 7, ಮಂಗಳೂರಿನಲ್ಲಿ 5, ಕುಂದಾಪುರದಲ್ಲಿ 1 ಹಾಗೂ ಕಾಪು ತಾಲೂಕಿನ ಕಳತ್ತೂರು ಗ್ರಾಮದಲ್ಲಿ 4 ಮನೆಗಳನ್ನು ನಿರ್ಮಿಸಲಾಗಿದೆ. ಮಂಗಳೂರಿನಲ್ಲಿ ನಡೆದ ವಿಶ್ವ ಬಂಟರ ಪ್ರತಿಷ್ಠಾನ […]
ಕುಲಾಲರ ಮಾತೃ ಸಂಘದ ಮಹಿಳಾ ವಿಭಾಗದ ವತಿಯಿಂದ ಶ್ರೀ ದೇವಿಗೆ ಸ್ವರ್ಣ ಮಲ್ಲಿಗೆ ಹಾರ ಸಮರ್ಪಣೆ

ಮಂಗಳೂರು: ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಡಿ.18 ಭಾನುವಾರದಂದು ಸಂಜೆ 5 ಗಂಟೆಗೆ ಸಮಾಜದ ಭಕ್ತಿಯ ಕಾಣಿಕೆಯಾಗಿ ಶ್ರೀ ದೇವಿಗೆ ಚಿನ್ನದ ಮಲ್ಲಿಗೆ ಹಾರ ಹಾಗೂ ಮಲ್ಲಿಗೆ ಹೂವಿನ ಅಲಂಕಾರ ಸೇವೆಯನ್ನು ಸಮರ್ಪಿಸಲಾಯಿತು. ಮಹಿಳಾ ವಿಭಾಗದ ಸದಸ್ಯೆಯರು ಸ್ವರ್ಣ ಹಾರವನ್ನು ಚೆಂಡೆ ವಾದ್ಯ ಕಲಶಗಳ ಸಹಿತ ಮರೆವಣಿಗೆಯ ಮೂಲಕ ಶ್ರೀದೇವಿಗೆ ಸಮರ್ಪಿಸಿದರು. ಈ ಸ್ವರ್ಣ ಮಲ್ಲಿಗೆ ಹಾರವನ್ನು ಮಂಗಳೂರಿನ ಪ್ರಖ್ಯಾತ ಜ್ಯುವೆಲ್ಲರಿ ಸಂಸ್ಥೆಯಾದ ಭೀಮಾ ಜ್ಯುವೆಲರ್ಸ್ ನವರು ತಯಾರಿಸಿದ್ದು, […]
ಇಂಡಿಯನ್ ಆಯಿಲ್ ಹಾಗೂ ಎಂಆರ್‌ಪಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (IOCL) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಮೆಕ್ಯಾನಿಕಲ್, ಇಲೆಕ್ಟ್ರೀಷಿಯನ್, ಇನ್‌ಸ್ಟ್ರುಮೆಂಟೇಷನ್, ಸಿವಿಲ್, ಫಿಟ್ಟರ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್, ಮಷಿನಿಸ್ಟ್, ಡಾಟಾ ಎಂಟ್ರಿ ಆಪರೇಟರ್, ಹೀಗೆ ಹಲವು ವಿಭಾಗಗಳಲ್ಲಿ ತರಬೇತಿಗೆ ಅಭ್ಯರ್ಥಿಗಳನ್ನು ನಿಯೋಜಿಸಲಾಗುತ್ತದೆ. ರಾಜ್ಯ ಹಾಗೂ ಟ್ರೇಡ್ / ಟೆಕ್ನೀಷಿಯನ್ / ಗ್ರಾಜುಯೇಟ್‌ವಾರು ಹುದ್ದೆಗಳ ಸಂಖ್ಯೆಗಳನ್ನು ಕೆಳಗಿನ ನೋಟಿಫಿಕೇಶನ್‌ನಲ್ಲಿ ಓದಿ ತಿಳಿಯಬಹುದು. […]
ಚುನಾವಣೆ ಗೆಲ್ಲಲು ಕಾಂಗ್ರೆಸ್ ಕಸರತ್ತು: ಬದಲಾಯಿತು ಜಿಲ್ಲಾ ಕಚೇರಿಯ ವಾಸ್ತು?

ಮಂಗಳೂರು: ಇಲ್ಲಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಬಿರುಸಿನ ಕಾಮಗಾರಿ ನಡೆಯುತ್ತಿದ್ದು, ವಾಸ್ತುಶಾಸ್ತ್ರದಲ್ಲಿ ನಂಬಿಕೆ ಇಟ್ಟಿರುವ ಪಕ್ಷದ ಮುಖಂಡರೊಬ್ಬರು ಅಧ್ಯಕ್ಷರ ಅನುಮತಿ ಮೇರೆಗೆ ಈ ನವೀಕರಣ ಕಾಮಗಾರಿ ನಡೆಸಿದ್ದಾರೆ ಎನ್ನಲಾಗಿದೆ. ಜಿಲ್ಲಾ ಕಾಂಗ್ರೆಸ್ ಭವನದ ಪ್ರವೇಶ ದ್ವಾರದ ಮೆಟ್ಟಿಲುಗಳ ನವೀಕರಣ ಸೇರಿದಂತೆ ಇತರ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ವಾಸ್ತುದೋಷ ನಿವಾರಣೆಗಾಗಿ ಈ ಕೆಲಸ ಮಾಡಲಾಗಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಇದನ್ನು ತಳ್ಳಿ ಹಾಕಿರುವ ಕಾಂಗ್ರೆಸ್, ನೀರಿನ ಟ್ಯಾಂಕಿಯ ಮತ್ತು ಮೆಟ್ಟಿಲಿನ ದುರಸ್ತಿ ಮಾಡಲಾಗಿದೆ ಎಂದಿದ್ದಾರೆ. […]
ಮಂಗಳೂರು: ಫ್ರೆಶರ್‌ಗಳಿಗಾಗಿ ಡಿ.16 ರಂದು ಇನ್ಫೋಸಿಸ್ ನಲ್ಲಿ ಸಂದರ್ಶನ

ಮಂಗಳೂರು:ಬಿಎ,ಬಿಕಾಂ, ಎಂಕಾಂ, ಬಿಬಿಎ ಫ್ರೆಶರ್‌ಗಳಿಗೆ ಇನ್ಫೋಸಿಸ್‌ನಲ್ಲಿ ಸಂದರ್ಶನವನ್ನು ಡಿ.16 ರಂದು ಇನ್ಫೋಸಿಸ್ ಮಂಗಳೂರು ಮುಡಿಪು ಕಚೇರಿಯಲ್ಲಿ ನಿಗದಿಪಡಿಸಲಾಗಿದೆ. ನಿಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಿ.