ಮಂಗಳೂರು: ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ರಸ್ತೆಗಿಳಿಯಲಿವೆ ‘ಕೋಬ್ರಾ’ಗಳು; ಮಂಗಳೂರು ನಗರ ಪೊಲೀಸರ ಉಪಕ್ರಮ
ಮಂಗಳೂರು: ಮಂಗಳೂರು ಪೊಲೀಸರು ನಾಲ್ಕು ಕೋಬ್ರಾ ದ್ವಿಚಕ್ರ ಸಂಚಾರ ಗಸ್ತು ವಾಹನಗಳನ್ನು ಪರಿಚಯಿಸಿದರು. ಟ್ರಾಫಿಕ್ ಪೂರ್ವ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳಿಗೆ ಕ್ರಮವಾಗಿ ಎರಡು ವಾಹನಗಳನ್ನು ಸೇರ್ಪಡೆಗೊಳಿಸಿದರು. ಮಂಗಳವಾರದಂದು ಕೋಬ್ರಾ ವಾಹನಗಳನ್ನು ಬಿಡುಗಡೆಮಾಡಲಾಯಿತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಸುದ್ದಿಗಾರರಿಗೆ ತಿಳಿಸಿದರು. ಇವು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲಿವೆ. ಈ ವಾಹನಗಳಲ್ಲಿ ಸೈರನ್ ಮತ್ತು ಮೈಕ್ ವ್ಯವಸ್ಥೆ ಇರಲಿದೆ. ಯಾವುದೇ ಟ್ರಾಫಿಕ್ ಸಮಸ್ಯೆ ಅಥವಾ ಅಪಘಾತ ಸಂಭವಿಸಿದಲ್ಲಿ ಈ ವಾಹನಗಳು […]
ಸತತ ಐದನೇ ಬಾರಿ ಗೆಲುವು ದಾಖಲಿಸಿದ ಯುಟಿ ಖಾದರ್
ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯುಟಿ ಖಾದರ್ ಮಂಗಳೂರು ಕ್ಷೇತ್ರದಲ್ಲಿ 82,637 ಮತಗಳನ್ನು ಪಡೆಯುವ ಮೂಲಕ ಸತತ ಐದನೇ ಗೆಲುವು ದಾಖಲಿಸಿದ್ದಾರೆ. ಎನ್.ಐ.ಟಿ.ಕೆನಲ್ಲಿ ಮತ ಎಣಿಕೆ ಆರಂಭವಾದಾಗಿನಿಂದ ಖಾದರ್ ಮುನ್ನಡೆ ಕಾಯ್ದುಕೊಂಡಿದ್ದರು. ಇದೇ ವೇಳೆ ಬಿಜೆಪಿಯ ಸತೀಶ್ ಕುಂಪಲ 59,660 ಮತಗಳನ್ನು ಪಡೆದಿದ್ದಾರೆ.
ಮಂಗಳೂರು: ಎಂಸಿಸಿ ಬ್ಯಾಂಕ್ ವತಿಯಿಂದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ
ಮಂಗಳೂರು: ಕರಾವಳಿ ಕರ್ನಾಟಕದ ಪ್ರಥಮ ನಗರ ಕೇಂದ್ರಿತ ಕೋ-ಆಪ್ ಬ್ಯಾಂಕ್‌ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನವನ್ನು ಮೇ 7 ರಂದು ಬ್ಯಾಂಕಿನ ಆಡಳಿತ ಕಚೇರಿ ಆವರಣದಲ್ಲಿ 111 ವರ್ಷಗಳ ಸಮರ್ಪಿತ ಸಮಾಜ ಸೇವೆಯನ್ನು ಪೂರ್ಣಗೊಳಿಸುವುದರೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಗುರು ಫಾ.ಬೋನವೆಂಚರ್ ನಜರೆತ್ ಅವರು ಪವಿತ್ರ ಪೂಜೆಯನ್ನು ನೆರವೇರಿಸಿ ಈ ದಿನದ ಮಹತ್ವವನ್ನು ವಿವರಿಸಿದರು. ದೂರದೃಷ್ಟಿಯ ಸಂಸ್ಥಾಪಕ ಪಿಎಫ್‌ಎಕ್ಸ್ ಸಲ್ಡಾನ್ಹಾ ಅವರು ಸಮಾಜದ ಅನುಕೂಲಕ್ಕಾಗಿ ಸ್ಥಾಪಿಸಿದ ಶ್ರೇಷ್ಠ ಸಂಸ್ಥೆಯ ಉದಾತ್ತ ಕಾರ್ಯವನ್ನು ಸ್ಮರಿಸಿದರು. ಕಳೆದ […]
ಮಂಗಳೂರು: ಭೀಮಾ ಜ್ಯುವೆಲ್ಲರ್ಸ್ ನಲ್ಲಿ ನೇರ ಸಂದರ್ಶನ
ಮಂಗಳೂರು: ಭೀಮಾ ಜ್ಯುವೆಲ್ಲರ್ಸ್ ಬೆಂಗಳೂರು ಮಳಿಗೆಗೆ ಕ್ಯಾಷಿಯರ್, ಫೀಲ್ಡ್ ಮತ್ತು ಮಾರ್ಕೆಂಟಿಗ್ ಸ್ಟಾಫ್, ಸೇಲ್ಸ್ ಸ್ಟಾಫ್ ಹಾಗೂ ಆಫೀಸ್ ಅಸಿಸ್ಸ್ಟೆಂಟ್ ಹುದ್ದೆಗಳಿಗಾಗಿ ಅಭ್ಯರ್ಥಿಗಳ ಅವಶ್ಯಕತೆ ಇದ್ದು, ಚಿನ್ನಾಭರಣ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವವಿರುವವರು ಮೇ 2 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಗರದ ಬೆಂದೂರಿನಲ್ಲಿರುವ ಎಸ್.ಸಿಎಸ್ ಹಾಸ್ಪಿಟಲ್ ಬಳಿ ಇರುವ ಭೀಮಾ ಸಂಸ್ಥೆಯ ಮಳಿಗೆಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ಕನ್ನಡ ಬಲ್ಲವರಾಗಿರಬೇಕು. ಜೊತೆಗೆ ಮಲೆಯಾಳಿ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ […]
ಮಂಗಳೂರಿನಲ್ಲಿ ಪೆಜಕಾಯಿ ಕೊಯ್ದು ಸಂಭ್ರಮಿಸಿದ ಕರಾವಳಿ ಕುವರಿ ಪೂಜಾ ಹೆಗ್ಡೆ
ಮಂಗಳೂರು: ತಮ್ಮ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರ ಕಾರ್ಯ ಹಾಗೂ ಚಿತ್ರ ಬಿಡುಗಡೆಯಲ್ಲಿ ವ್ಯಸ್ತರಾಗಿದ್ದ ಪೂಜಾ ಹೆಗ್ಡೆ, ತಮ್ಮ ಹುಟ್ಟೂರಿಗೆ ಸಣ್ಣದೊಂದು ಭೇಟಿ ನೀಡಿದ್ದು, ಆ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. “ಎ ಕ್ವಿಕ್ ಟ್ರಿಪ್ ಬ್ಯಾಕ್ ಹೋಮ್” ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡೀಯೋ ಹಂಚಿಕೊಂಡಿರುವ ಅವರು, ಮಂಗಳೂರಿನಲ್ಲಿರುವ ತಮ್ಮ ಮನೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮಂಗಳೂರಿನ ಜನತೆಗೆ ಚಿರಪರಿಚಿತ “ಪೆಜಕಾಯಿ” ಕೊಯ್ಯುವ ಚಿತ್ರ, ತಂದೆ ಹಾಗೂ ಮುದ್ದಿನ ಬ್ರೌನಿಯ […]