ಮಂಗಳೂರಿನಿಂದ ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಗೋವಾದಲ್ಲಿ ಪತ್ತೆ

ಮಂಗಳೂರು: ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಭಾರ್ಗವಿ ಎನ್ನುವ ಬಾಲಕಿ ಸೋಮವಾರ ಮುಂಜಾನೆ 3 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ನಾಪತ್ತೆಯಾಗಿದ್ದ ಘಟನೆ ವರದಿಯಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾಪತ್ತೆಯಾದ ಹುಡುಗಿ ಪತ್ತೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು 14 ವರ್ಷದ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿದ್ದು, ಪಣಜಿ ಪೊಲೀಸ್ ಠಾಣೆಯಲ್ಲಿದ್ದಾಳೆ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ. […]

ಮಂಗಳೂರು: ಸ್ಕೂಟರ್ ಗೆ ಬಸ್ ಡಿಕ್ಕಿ; ಬಾಲಕ ಸಾವು

ಮಂಗಳೂರು: ಇಲ್ಲಿನ ಲಾಲ್ ಬಾಗ್ ಸಿಗ್ನಲ್ ಬಳಿಯಲ್ಲಿ ಖಾಸಗಿ ಬಸ್ಸೊಂದು ವೇಗದಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬನ ಮರಣ ಸಂಭವಿಸಿದೆ. ನೀರುಮಾರ್ಗದ ಧನು(13) ಎಂಬ ಬಾಲಕ ಮೃತಪಟ್ಟ ದುರ್ದೈವಿ. ತನ್ನ ಸಂಬಂಧಿ ಜೊತೆ ಸ್ಕೂಟರಿನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ವೇಳೆಯಲ್ಲಿ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದದ್ದರಿಂದ ಸ್ಕೂಟರ್ ಚಲಾಯಿಸುತ್ತಿದ್ದ ಸಂಬಂಧಿ ಎಡಗಡೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಧನು ಬಲಗಡೆಗೆ ಬಿದ್ದಿದ್ದು, ಆತನ ಮೇಲೆ ಬಸ್ ನ ಚಕ್ರ ಹಾದು ಹೋಗಿದೆ. ಇದರಿಂದಾಗಿ […]

ಪಂಚೆ ಉಟ್ಟು ಮುಂಡಾಸು ಕಟ್ಟಿ ಕಾಂತಾರ ವೀಕ್ಷಿಸಿದ ಎಂ.ಆರ್.ಪಿ.ಎಲ್ ಉದ್ಯೋಗಿಗಳು!

ಮಂಗಳೂರು: ತುಳುವ ನಾಡಿನ ಸೊಗಡನ್ನು ಹೊಂದಿರುವ ಕಾಂತಾರ ಸೃಷ್ಟಿಸಿದ ಸಂಚಲನ ಹೇಗಿದೆಯೆಂದರೆ ಇದೀಗ ವಿಶ್ವವೆ ತುಳುವ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದೆ ಮಾತ್ರವಲ್ಲ, ಇಲ್ಲಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವತ್ತ ಮುಖ ಮಾಡಿದೆ. ಇದೀಗ ಎಂ.ಆರ್.ಪಿ.ಎಲ್ ನ ಉದ್ಯೋಗಿಗಳು ಪಂಚೆ ಉಟ್ಟುಕೊಂಡು ಎರಡನೇ ಬಾರಿಗೆ ಚಲನಚಿತ್ರ ವೀಕ್ಷಣೆಗೆ ಹೊರಟಿದ್ದು, ಇದು ಈ ಸಿನಿಮಾ ಮತ್ತು ಈ ಮಣ್ಣಿನ ಸಂಸ್ಕೃತಿಯ ಬಗ್ಗೆ ಈ ಯುವಕರಿಗಿರುವ ಅಭಿಮಾನವನ್ನು ಎತ್ತಿ ತೋರಿಸುತ್ತಿದೆ. ಮೊದಲನೆ ಬಾರಿಗೆ ಕಾಂತಾರ ಚಲನಚಿತ್ರವನ್ನು ಕಂಡು ಖುಷಿಪಟ್ಟ ಈ ಯುವಕರ ತಂಡವು […]

ದೀಪಾವಳಿಯಂದು ಖಂಡಗ್ರಾಸ ಸೂರ್ಯಗ್ರಹಣ: ಸೂರ್ಯಾಸ್ತಮಾನದ ಹೊತ್ತಿನಲ್ಲಿ ಖಗೋಳ ವಿದ್ಯಮಾನ

ಉಡುಪಿ/ ಮಂಗಳೂರು: ಅಕ್ಟೋಬರ್ 25 ರ ದೀಪಾವಳಿ ಸಂಭ್ರಮದಂದು ಭಾರತವು ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಕೊಲ್ಕತ್ತಾದಿಂದ ಭಾಗಶಃ ಸೂರ್ಯಗ್ರಹಣವನ್ನು ಸ್ವಲ್ಪ ಸಮಯದವರೆಗೆ ವೀಕ್ಷಿಸಬಹುದಾದರೆ, ಭಾರತದ ಉತ್ತರ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಚೆನ್ನಾಗಿ ಕಾಣಬಹುದು. ಸೂರ್ಯಸ್ತಮಾನದ ಸಮಯದಲ್ಲಿ ಖಂಡಗ್ರಾಸ ಸೂರ್ಯಗ್ರಹಣ ನಡೆಯುವುದರಿಂದ ಈಶಾನ್ಯ ಭಾರತದಿಂದ ಈ ಗ್ರಹಣವನ್ನು ವೀಕ್ಷಿಸಲು ಸಾಧ್ಯವಿಲ್ಲ. ಯುರೋಪ್, ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ ಈ ವಿದ್ಯಮಾನವನ್ನು ಗಮನಿಸಬಹುದು. ಅಕ್ಟೋಬರ್ 25ರಂದು ಸೂರ್ಯ, ಚಂದ್ರ ಮತ್ತು ಭೂಮಿಯು ಬಹುತೇಕ ಒಂದೇ ಸಮತಲದಲ್ಲಿರುತ್ತದೆ, ಇದರ ಪರಿಣಾಮವಾಗಿ ಚಂದ್ರನು […]

ಮಂಗಳೂರು: ಕರ್ತವ್ಯ ನಿರತ ಮಹಿಳಾ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರದ ಗೇಟ್ ನಲ್ಲಿ ಬುಧವಾರದಂದು ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ನಡೆದಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜ್ಯೋತಿ ಭಾಯಿ ಸಿಂಗ್ ಪರ್ಮಾರ್ (33) ನವಮಂಗಳೂರು ಬಂದರು ಪ್ರಾಧಿಕಾರದ ಗೇಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲೇ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಜ್ಯೋತಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಈಕೆಯ ಗಂಡ ಓಂಬೀರ್ […]