ಮಂಗಳೂರು: ನ 26ರಂದು ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಮಂಗಳಾದೇವಿ ದಶಮಾನೋತ್ಸವ ಸಮಾರಂಭ
ಮಂಗಳೂರು: ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ, ಮಂಗಳಾದೇವಿ, ಇದರ ದಶಮಾನೋತ್ಸವ ಸಮಾರಂಭವು ಶ್ರೀ ಮಂಗಳಾದೇವಿ ದೇವಸ್ಥಾನದ ಅಂಗಣದೊಳಗೆ ನವೆಂಬರ್ 26ರಂದು ಜರಗಲಿದ್ದು ಆ ಪ್ರಯುಕ್ತ “ತ್ರಿಜನ್ಮ ಮೋಕ್ಷ ” ಕನ್ನಡ ಯಕ್ಷಗಾನ ಬಯಲಾಟ ನಡೆಯಲಿದೆ. ಯಕ್ಷಗಾನ ಬಯಲಾಟದ ಪೂರ್ವಭಾವಿಯಾಗಿ ಬೆಳಗ್ಗೆ 9 ರಿಂದ 10.30 ರವರೆಗೆ ಷಣ್ಮುಖಪ್ರಿಯ ಭಜನಾ ತಂಡ, ಪಡೀಲ್ ಇವರಿಂದ ಭಜನಾ ಕಾರ್ಯಕ್ರಮವಿದೆ. 10.30 ಕ್ಕೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಗಿ 11.30 ರಿಂದ ಖ್ಯಾತ ಭಾಗವತ ದಯಾನಂದ್ ಕೋಡಿಕಲ್ ಮತ್ತು ಇವರ ಶಿಷ್ಯ […]