ನಿರ್ದೇಶಕ , ಪಂಜಾಬಿ ನಟ ಮಂಗಲ್ ಧಿಲ್ಲೋನ್ ನಿಧನ
ದೀರ್ಘಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಸುಮಾರು ಒಂದು ತಿಂಗಳ ಕಾಲ ಪಂಜಾಬಿನ ಲೂಧಿಯಾನದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪಂಜಾಬಿ ನಟ, ನಿರ್ದೇಶಕ, ನಿರ್ಮಾಪಕ ಮಂಗಲ್ ಧಿಲ್ಲೋನ್ ಇಂದು ಕೊನೆಯುಸಿರೆಳೆದಿದ್ದಾರೆ. ಮನರಂಜನಾ ಲೋಕದಿಂದ ಅತ್ಯಂತ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಜುನೂನ್ ಮತ್ತು ಬುನಿಯಾದ್ ಖ್ಯಾತಿಯ ಮಂಗಲ್ ಧಿಲ್ಲೋನ್ ನಿಧನರಾಗಿದ್ದಾರೆ. ಬಾಲಿವುಡ್ ನಟ ಯಶಪಾಲ್ ಶರ್ಮಾ ಅವರು ಮಂಗಲ್ ಸಾವನ್ನು ಖಚಿತಪಡಿಸಿದ್ದಾರೆ. ಮಂಗಲ್ ಧಿಲ್ಲೋನ್ ಇನ್ನು […]