ನಿರ್ದೇಶಕ , ಪಂಜಾಬಿ ನಟ ಮಂಗಲ್ ಧಿಲ್ಲೋನ್ ನಿಧನ

ದೀರ್ಘಕಾಲದಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು, ಸುಮಾರು ಒಂದು ತಿಂಗಳ ಕಾಲ ಪಂಜಾಬಿನ ಲೂಧಿಯಾನದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

ದೀರ್ಘಕಾಲ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪಂಜಾಬಿ ನಟ, ನಿರ್ದೇಶಕ, ನಿರ್ಮಾಪಕ ಮಂಗಲ್ ಧಿಲ್ಲೋನ್ ಇಂದು ಕೊನೆಯುಸಿರೆಳೆದಿದ್ದಾರೆ.
ಮನರಂಜನಾ ಲೋಕದಿಂದ ಅತ್ಯಂತ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಜುನೂನ್ ಮತ್ತು ಬುನಿಯಾದ್ ಖ್ಯಾತಿಯ ಮಂಗಲ್ ಧಿಲ್ಲೋನ್ ನಿಧನರಾಗಿದ್ದಾರೆ.

ಬಾಲಿವುಡ್ ನಟ ಯಶಪಾಲ್ ಶರ್ಮಾ ಅವರು ಮಂಗಲ್​ ಸಾವನ್ನು ಖಚಿತಪಡಿಸಿದ್ದಾರೆ. ಮಂಗಲ್ ಧಿಲ್ಲೋನ್ ಇನ್ನು ನಮ್ಮೊಂದಿಗಿಲ್ಲ ಎಂದು ತಮ್ಮ ಫೇಸ್ ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಜೊತೆಗೆ ನಟ ಮಿತಾ ವಶಿಷ್ಠ ಕೂಡ ಇನ್​ಸ್ಟಾದಲ್ಲಿ ಮಂಗಲ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಟ್ವಿಟ್ಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಂಗಲ್​ ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ವುಂಡರ್ ಜಟಾನಾ ಗ್ರಾಮದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದರು. ನಾಲ್ಕನೇ ತರಗತಿವರೆಗೆ ಪಂಜ್ ಗ್ರಾಮೀಣ ಕಲನ್ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಇದಾದ ಬಳಿಕ ತಂದೆಯೊಂದಿಗೆ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಹೈಸ್ಕೂಲ್ ಶಿಕ್ಷಣ ಮುಗಿಸಿ ಪಂಜಾಬಿಗೆ ಮರಳಿದರು. ಪದವಿಯ ನಂತರ ಅವರು ದೆಹಲಿಯಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡಿದರು.

1979 ರಲ್ಲಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ರಂಗಭೂಮಿ ವಿಭಾಗಕ್ಕೆ ಸೇರಿದರು. 1980 ರಲ್ಲಿ ನಟನೆಯಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದರು. ನಂತರ 1986 ರ ದೂರದರ್ಶನ ಸರಣಿ ಬುನಿಯಾದ್‌ನಲ್ಲಿ ಲುಭಯಾ ರಾಮ್ ಆಗಿ ಕಾಣಿಸಿಕೊಂಡರು. 1988 ರಲ್ಲಿ ರೇಖಾ ನಟಿಸಿದ ಖೂನ್ ಭಾರಿ ಮಾಂಗ್‌ ಚಿತ್ರದಲ್ಲಿ ವಕೀಲರಾಗಿ ಗಮನ ಸೆಳೆದರು. ಬಳಿಕ ಅತ್ಯಂತ ಪ್ರಸಿದ್ಧ ಧಾರಾವಾಹಿ ಬುನಿಯಾದ್‌ನಿಂದ ಮನ್ನಣೆ ಪಡೆದರು.

ಇದರ ನಂತರ ಅವರು ಕಿಷ್ಟಮ್, ದಿ ಗ್ರೇಟ್ ಮರಾಠಾ, ಮುಜ್ರಿಮ್ ಹಜೀರ್, ರಿಶ್ತಾ ಮೌಲಾನಾ ಆಜಾದ್, ನೂರ್ಜಹಾನ್ ಮುಂತಾದ ಅನೇಕ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಸ್ವರ್ಗ ಯಹಾನ್, ಪ್ಯಾರ್ ಕಾ ದೇವತಾ, ರಣಭೂಮಿ, ನರಕ್ ಯಹಾನ್, ವಿಶ್ವಾತ್ಮ, ದಿಲ್ ತೇರಾ ಆಶಿಕ್ ಮತ್ತು ಟ್ರೈನ್ ಟು ಪಾಕಿಸ್ತಾನ್ ಅವರ ಕೆಲವು ಪ್ರಮುಖ ಚಲನಚಿತ್ರಗಳು. ಅವರು 2003 ರ ಫರ್ದೀನ್ ಖಾನ್ ಅವರ ಚಿತ್ರ ಜನಶೀನ್ ನಲ್ಲಿ ಕಾಣಿಸಿಕೊಂಡರು. ಅವರು ಬಹುತೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಕೊನೆಯದಾಗಿ 2017 ರ ತೂಫಾನ್ ಸಿಂಗ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

“ಖ್ಯಾತ ನಟ, ಬರಹಗಾರ, ನಿರ್ದೇಶಕ ಮತ್ತು ಪಂಜಾಬಿ ಸಿನಿಮಾದ ನಿರ್ಮಾಪಕ ಶ್ರೀ ಮಂಗಲ್ ಧಿಲ್ಲೋನ್ ಅವರ ನಿಧನದ ಬಗ್ಗೆ ತಿಳಿದು ದುಃಖವಾಗಿದೆ. ಇದು ಭಾರತೀಯ ಚಲನಚಿತ್ರೋದ್ಯಮಕ್ಕೆ ದೊಡ್ಡ ನಷ್ಟವಾಗಿದೆ. ಅನೇಕ ಜನರು ಅವರ ಆಕರ್ಷಕ ಧ್ವನಿ ಮತ್ತು ನಟನೆಯನ್ನು ಇಂದಿಗೆ ಕಳೆದುಕೊಂಡಿದ್ದಾರೆ. ನನ್ನ ಪ್ರಾಮಾಣಿಕ ಸಂತಾಪವನ್ನು ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ತಿಳಿಸುತ್ತೇನೆ” ಎಂದು ಟ್ವೀಟ್​ ಮಾಡಿದ್ದಾರೆ.
ಮಂಗಲ್​ ಧಿಲ್ಲೋನ್ ಸಿನಿ ಪಯಣ: ಮಂಗಲ್ ಧಿಲ್ಲೋನ್ ಪಂಜಾಬಿ ಚಲನಚಿತ್ರೋದ್ಯಮದಲ್ಲಿ ಬಹಳ ಪ್ರಸಿದ್ಧರಾಗಿದ್ದರು. ಚಲನಚಿತ್ರ ಮತ್ತು ಕಿರುತೆರೆ ಜಗತ್ತಿನಲ್ಲಿ ತಮ್ಮದೇ ಆದ ಹೆಸರನ್ನು ನಿರ್ಮಿಸಿದ್ದರು. ಅವರು ಅನೇಕ ಪಂಜಾಬಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಹಲವು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.