ಮಂಚಿಕೆರೆ: ಬೈಕ್ ಗೆ ಕಾರು ಡಿಕ್ಕಿ; ಸವಾರ ಗಂಭೀರ

ಮಣಿಪಾಲ: ಮಾರುತಿ ಸುಜುಕಿ ಸ್ವಿಫ್ಟ್ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಮಣಿಪಾಲದ ಮಂಚಿಕೆರೆಯ ನಾಗಬನದ ಸಮೀಪ  ಇಂದು ಸಂಜೆ ಸಂಭವಿಸಿದೆ. ಗಾಯಗೊಂಡವರನ್ನು ಸ್ಥಳೀಯ ಮಂಚಿಕೆರೆಯ ಉಮೇಶ್ ಎಂದು ಗುರುತಿಸಲಾಗಿದೆ. ಕೇರಳ ನೋಂದಣಿ ಹೊಂದಿರುವ ಸ್ವಿಫ್ಟ್ ಕಾರು ಅತೀ ವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಬಂದು ಬೈಕ್ ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಮದ್ಯಸೇವನೆ ಮಾಡಿದ್ದನು ಎನ್ನಲಾಗಿದೆ. ಇದರಿಂದ ಉಮೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ […]