ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ
ಉಡುಪಿ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಸಂಸ್ಥೆಗಳ 5 ಅಧಿಸೂಚಿತ ಸಂಸ್ಥೆಗಳಿಗೆ ಮರು ಪ್ರಕಟಣೆ ಮತ್ತು 10 ಹೊಸ ಅಧಿಸೂಚಿತ ಸಂಸ್ಥೆ ಹಾಗೂ ದೇವಸ್ಥಾನಗಳಿಗೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಭಕ್ತಾಧಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಧಿಸೂಚಿತ ಮರು ಪ್ರಕಟಣೆಯ ಪ್ರವರ್ಗ ಸಿ ಸಂಸ್ಥೆಗಳು: ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ (ಮಹಿಳಾ 1 ಸ್ಥಾನಕ್ಕೆ), ಕಾಪು ತಾಲೂಕು ಕಟಪಾಡಿ ಏಣಗುಡ್ಡೆ ಚೊಕ್ಕಾಡಿ […]