ನಾಪತ್ತೆಯಾದ ಮೀನುಗಾರರನ್ನು ಹುಡುಕಿಕೊಡುವಲ್ಲಿ ಸರ್ಕಾರದ ನಿರ್ಲಕ್ಷ್ಯ: ಮೀನುಗಾರರ ಕುಟುಂಬದಿಂದ ಮತದಾನ ಬಹಿಷ್ಕಾರ
![](https://udupixpress.com/wp-content/uploads/2019/03/12MNUDUPIBOAT.jpg)
ಉಡುಪಿ: ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರನ್ನು ಹುಡುಕಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ನಾಪತ್ತೆಯಾದ ಮೀನುಗಾರರ ಮನೆಯ ಕುಟುಂಬದವರು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ 87 ದಿನಗಳು ಕಳೆದಿವೆ. ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರ ಕುಟುಂಬದವರಲ್ಲಿ ಮೌನದ ಛಾಯೆ ಆವರಿಸಿದೆ. ಮೀನುಗಾರರು ಬರುತ್ತಾರೆ ಎಂಬ ನಂಬಿಕೆಯ ಮೇಲೆ ದಿನದೂಡುತ್ತಿದ್ದಾರೆ. ಆದರೆ ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ಮೌನವಾಗಿರುವ […]
ಮಹಿಳಾ ದಿನಾಚರಣೆ: ಮಲ್ಪೆ ಬೀಚ್‍ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
![](https://udupixpress.com/wp-content/uploads/2019/03/MALPE-SPORTS.jpg)
ಉಡುಪಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮಹಿಳೆಯರಿಗೆ ವಿವಿಧ ಕ್ರೀಡಾಕೂಟ ಶುಕ್ರವಾರ ಮಲ್ಪೆ ಬೀಚ್‍ನಲ್ಲಿ ನಡೆಯಿತು. ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ, ಮಹಿಳಾ ಮಂಡಳಿ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಮಾತನಾಡಿ, ಮತದಾನದ ಬಗ್ಗೆ ಜಾಗೃತಿ ಮೂಡಿಸಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಪಾಲ್ಗೊಳ್ಳುವಂತಾಗಲು ಈ […]
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಯಶ್ ಪಾಲ್ ಸುವರ್ಣಗೆ ಒಲಿಯಲಿದೆಯೇ ಬಿಜೆಪಿ ಟಿಕೆಟ್?
![](https://udupixpress.com/wp-content/uploads/2019/03/asha_11119_yashpalsuvarna.jpg)
ಉಡುಪಿ: ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಬಹಳಷ್ಟು ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ಬಿಜೆಪಿಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಗಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ ಶುರುವಾಗಿದೆ. ಆದರೆ ಬಿಜೆಪಿ ಹೈಕಮಾಂಡ್ ಯುವ ನಾಯಕನಿಗೆ ಮಣೆ ಹಾಕಲಿದೆ ಎಂಬ ಅಂಶ ಹೊರಬಿದ್ದಿದೆ. ಈ ವಿಚಾರ ಸದ್ಯ ಬಿಜೆಪಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ […]
ನಾಪತ್ತೆಯಾದ ಮಲ್ಪೆ ಮೀನುಗಾರರು ದುಬೈನಲ್ಲಿ ಪತ್ತೆ?
![](https://udupixpress.com/wp-content/uploads/2019/03/Suvarna-tribhuja-missing-boat_750.jpg)
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರರು ದುಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ಸಂಸದೆ ಮಿನಾಕ್ಷಿ ಲೇಖಿ ಭಾಷಣದಲ್ಲಿ ಪ್ರಸ್ತಾಪಿಸಿದರು. ಭಾನುವಾರ ಮಲ್ಪೆಯಲ್ಲಿ ನಡೆದ ಪಾಂಚಜನ್ಯ ಸಮಾವೇಶದಲ್ಲಿ ಮಾತನಾಡುತ್ತಾ ಪ್ರಸ್ತಾಪಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇರದ ಕಾರಣ ಭಾಷಣ ಮುಗಿದ ಬಳಿಕ ಸಂಸದೆಯನ್ನು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಭಾರತದಿಂದ ನಾಪತ್ತೆಯಾದ ಮೀನುಗಾರರಲ್ಲಿ ಇಬ್ಬರು ದುಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಈ ಬಗ್ಗೆ ಹೆಚ್ಚೇನು ಮಾಹಿತಿ ಇಲ್ಲ. ಅವರು ಮಲ್ಪೆ […]
ಕಾಂಗ್ರೆಸ್ ಗೆ ದೇಶದ ರಕ್ಷಣೆಗಿಂತ ಸ್ವಾರ್ಥ ಸಾಧನೆ ಹೆಚ್ಚು: ಸಂಸದೆ ಮೀನಾಕ್ಷಿ ಲೇಖಿ ಆರೋಪ
![](https://udupixpress.com/wp-content/uploads/2019/03/Meenakshi-Lekhi_RS-lrg.jpg)
ಉಡುಪಿ: ಭಾರತೀಯ ಸೇನೆ ಇರುವುದು ದೇಶದ ರಕ್ಷಣೆಗೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕೆಲವರು (ಕಾಂಗ್ರೆಸ್ ನವರು) ಭಯೋತ್ಪಾದಕರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ ಸಾಕ್ಷಿ ಕೇಳುತ್ತಾರೆ. ಅವರಿಗೆ ದೇಶದ ರಕ್ಷಣೆಗಿಂತ ಹೆಚ್ಚಾಗಿ ಸ್ವಾರ್ಥ ಸಾಧನೆಯೇ ಹೆಚ್ಚಾಗಿದೆ ಎಂದು ಸಂಸದೆ ಮೀನಾಕ್ಷಿ ಲೇಖಿ ಟೀಕಿಸಿದರು. ನಮೋ ಭಾರತ್ ವತಿಯಿಂದ ಭಾನುವಾರ ಮಲ್ಪೆ ಬೀಚ್‌ನಲ್ಲಿ ಹಮ್ಮಿಕೊಂಡಿದ್ದ ಪಾಂಚಜನ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಗೆ ದೇಶದ ರಕ್ಷಣೆ ಮುಖವಲ್ಲ. ದೇಶವನ್ನು ಮತ್ತೆ ಲೂಟಿ ಹೊಡೆದು, ಕುಟುಂಬದ ರಕ್ಷಣೆ ಮಾಡಿಕೊಳ್ಳಬೇಕಿದೆ. ಹಾಗಾಗಿ ಅವರು ಮಹಾಘಟ್ […]