ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧೆಗೆ ಮಲ್ಪೆಯ ರೋಶಿನಿ ಆಯ್ಕೆ
ಉಡುಪಿ: ಜೀ ಕನ್ನಡ ವಾಹಿನಿಯಲ್ಲಿ ನಡೆಯುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗೆ ಮಲ್ಪೆಯ ರೋಶಿನಿ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಇವರು ಮಲ್ಪೆ ಬೈಲಕೆರೆಯ ಉಷಾ ಹಾಗೂ ಯುವರಾಜ್ ದಂಪತಿಯ ಪುತ್ರಿ. ಬೆಂಗಳೂರು ಮಲ್ಲೇಶ್ವರಂನ ವಿದ್ಯಾ ಮಂದಿರ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿರುವ ಇವರು, ಸುಮಾರು ಐದು ವರ್ಷಗಳಿಂದ ನಾಟ್ಯಶ್ವರ ನೃತ್ಯ ಸಂಘದ ಮಾಸ್ಟರ್ ಕೆ.ಪಿ.ಸತೀಶ್ ಬಾಬು ಅವರಲ್ಲಿ ಭರತ ನಾಟ್ಯವನ್ನು ಮತ್ತು ಸುಮಾರು ಒಂದೂವರೆ ವರ್ಷಗಳಿಂದ ಪಾಶ್ಚಾತ್ಯ ನೃತ್ಯದ ವಿವಿಧ ಪ್ರಕಾರಗಳನ್ನು ಗಾಯತ್ರಿನಗರದ ರಾಕ್ ಬ್ರೇಕರ್ಸ್ ಡ್ಯಾನ್ಸ್ ಅಕಾಡೆಮಿ […]