ಮಲ್ಪೆ: ಸಮುದ್ರದಲ್ಲಿ ಮುಳುಗುತ್ತಿದ್ದ ಐವರು ಪ್ರವಾಸಿಗರ ರಕ್ಷಣೆ: ಇಬ್ಬರ ಸ್ಥಿತಿ ಗಂಭೀರ
ಮಲ್ಪೆ: ಸಮುದ್ರದಲ್ಲಿ ಮುಳುಗುತ್ತಿದ್ದ ಐವರನ್ನು ರಕ್ಷಣೆ ಮಾಡಿದ ಘಟನೆ ಇಂದು ಮಲ್ಪೆ ಕಡಲ ಕಿನಾರೆಯಲ್ಲಿ ನಡೆದಿದೆ. ಐವರ ಪೈಕಿ ಓರ್ವ ಯುವಕ ಹಾಗೂ ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಐವರು ಕೂಡ ಬೆಂಗಳೂರಿನರಾಗಿದ್ದು, ಒಟ್ಟು ಹತ್ತು ಮಂದಿ ಪ್ರವಾಸಕ್ಕೆ ಬಂದಿದ್ದರು. ಅದರಲ್ಲಿ ಐದು ಮಂದಿ ಈಜಲು ಇಳಿದಿದ್ದು, ಸಮುದ್ರದಲೆಯ ಅಬ್ಬರಕ್ಕೆ ಮುಳುಗಿದ್ದಾರೆ ಎನ್ನಲಾಗಿದೆ. ಐವರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಜಸ್ಕಿ ಬೋಟ್ ಮತ್ತು ಪ್ರವಾಸಿಗರ ಬೋಟಿನ ಚಾಲಕರು ಕೂಡಲೇ ಅವರ ರಕ್ಷಣೆಗೆ ಧಾವಿಸಿದ್ದಾರೆ. ಅವರನ್ನು […]