ಮಲ್ಪೆ: ಅಜ್ಜಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಒಣಮೀನು ಕಳ್ಳ
ಉಡುಪಿ: ಒಣ ಮೀನು ಕಳ್ಳತನ ಮಾಡಲು ಬಂದಿದ್ದ ಖದೀಮನೊಬ್ಬ ಅಜ್ಜಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ. ಒಣಮೀನು ಕದಿಯುತ್ತಿದ್ದ ಕಳ್ಳನನ್ನು ತಮಿಳುನಾಡು ಮೂಲದ ರಮಾನಾಥ ಎಂದು ಗುರುತಿಸಲಾಗಿದೆ. ಮಲ್ಪೆ ಬಂದರಿನಲ್ಲಿ ಮೀನುಗಾರ ಮಹಿಳೆಯರು ಒಣಮೀನನ್ನು ಒಣಗಿಸಿ ಚೀಲದಲ್ಲಿ ಹಾಕಿ ಇಟ್ಟಿದ್ದರು. ಅವುಗಳನ್ನು ರಮಾನಾಥ ಕದ್ದು, ಆಟೊ ರಿಕ್ಷಾ ಚಾಲಕನೊಬ್ಬನಿಗೆ ಮಾರಲು ನೀಡುತ್ತಿದ್ದನು. ಇತ್ತೀಚಿನ ಕೆಲ ತಿಂಗಳಿನಿಂದ ಮಹಿಳೆಯರು ಚೀಲಗಳಲ್ಲಿ ಕಟ್ಟಿ ಗೂಡುಗಳಲ್ಲಿ ಇಟ್ಟಿದ್ದ ಒಣಗಿಸಿದ ಮೀನುಗಳು ಕಾಣೆಯಾಗುತ್ತಿತ್ತು. ಈ ಬಗ್ಗೆ […]