ಮಲ್ಪೆ: ಸಮುದ್ರದಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ ಮಕ್ಕಳ ರಕ್ಷಣೆ
ಮಲ್ಪೆ: ಮಲ್ಪೆ ಸಮೀಪದ ಕೋಡಿ ಬೆಂಗ್ರೆ ಪರಿಸರದ ಸಮುದ್ರದಲ್ಲಿ ಈಜಲು ಇಳಿದು ನೀರುಪಾಲಾಗುತ್ತಿದ್ದ ಇಬ್ಬರನ್ನು ಮೀನುಗಾರಿಕಾ ದೋಣಿಯಲ್ಲಿದ್ದವರು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಈ ಇಬ್ಬರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದ್ದು, ಮೂವರು ಯುವತಿಯರ ಸಹಿತ ವಿಹಾರಕ್ಕಾಗಿ ಬಂದಿದ್ದರು. ಈ ಪೈಕಿ ಇಬ್ಬರು ಕಡಲಿನಲ್ಲಿ ಈಜಲು ನೀರಿಗಿಳಿದಿದ್ದು, ಅಲೆಯ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗುತ್ತಿದ್ದರು. ಇದನ್ನು ಕಂಡ ಮೀನುಗಾರಿಕಾ ದೋಣಿಯಲ್ಲಿದ್ದವರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಿಳಿದಿದ್ದು ಇಬ್ಬರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಮಲ್ಪೆ: ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜದ ವತಿಯಿಂದ ರಾಮ ನಾಮ ಹವನ
ಮಲ್ಪೆ: ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜದ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆಯ ದಿನ ಬೆಳ್ಳಿಗೆ ಶ್ರೀ ರಾಮ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ರಾಮ ನಾಮ ಹವನ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮ ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಇದರ ಕೆ. ಗೋಕುಲದಾಸ್ ಪೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ […]
ಇಂದಿನಿಂದ ಮಲ್ಪೆ ಸೈಂಟ್ ಮೆರೀಸ್ ದ್ವೀಪ ಪ್ರವಾಸಿಗರಿಗೆ ಮುಕ್ತ
ಮಲ್ಪೆ: ಮಳೆಗಾಲದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದ್ದ ಇಲ್ಲಿನ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಬೋಟ್ ಗಳ ಸಂಚಾರವನ್ನು ಇಂದಿನಿಂದ(ಅ.19) ಪ್ರಾರಂಭಿಸಲಾಗಿದೆ. ಇಲ್ಲಿನ ಸೀ-ವಾಕ್ ಪ್ರದೇಶದ ಬಳಿ 4 ದೋಣಿಗಳು ಎಲ್ಲ ರೀತಿಯ ಸುರಕ್ಷಾ ಸಲಕರಣೆಗಳೊಂದಿಗೆ ಸಜ್ಜಾಗಿ ಪ್ರವಾಸಿಗರ ಸೇವೆಗೆ ಲಭ್ಯವಿದೆ ಎಂದು ಬೋಟ್ ಗಳ ಮುಖ್ಯಸ್ಥ ಗಣೇಶ್ ಮಲ್ಪೆ ತಿಳಿಸಿದ್ದಾರೆ.
ಮಲ್ಪೆ: ಕರ್ತವ್ಯಕ್ಕೆ ತೆರಳಿದ್ದ ವೇಳೆ ಬೋಟ್ ನಿಂದ ಕಾಲು ಜಾರಿ ಬಿದ್ದು ಮೀನುಗಾರ ಮೃತ್ಯು
ಮಲ್ಪೆ: ಮೀನುಗಾರಿಕೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಜಾರ್ಖಂಡ್ ಮೂಲದ ಮನೋಜ್ ಸನ್(32) ಮೃತ ಪಟ್ತ ವ್ಯಕ್ತಿ. ಆ.31 ರ ರಾತ್ರಿ ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಸುಮಾರು ಎರಡು ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸಲು ತೆರಳಿದ್ದರು. ದುರದೃಷ್ಟವಶಾತ್ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮನೋಜ್ ಸನ್ ಅವರನ್ನು ಸಹಚರ ಕೀರ್ತನ್ ಎಂಬವರು ಮೇಲಕ್ಕೆತ್ತಿ ಉಪಚಾರ ನೀಡಿದ್ದಾರೆ. ಆದರೂ ಮನೋಜ್ ಸನ್ ಸ್ವಸ್ಥರಾಗದ್ದನ್ನು ಕಂಡು ಮಣಿಪಾಲದ […]
ಮಲ್ಪೆ: ನೀರಿನಲ್ಲಿ ಮುಳುಗಿದ್ದ ದುಬಾರಿ ಐ-ಫೋನ್ ಮೇಲೆತ್ತಿ ಮಾಲಕರಿಗೆ ಹಸ್ತಾಂತರಿಸಿದ ಈಶ್ವರ್ ಮಲ್ಪೆ
ಮಲ್ಪೆ: ಇಲ್ಲಿನ ಹೆಸರಾಂತ ಈಜು ತಜ್ಞ, ನೀರಿನಲ್ಲಿ ಮುಳುಗಿದ್ದವರ ಮೇಲೆತ್ತುವ ಆಪದ್ಬಾಂಧವ ಈಶ್ವರ್ ಮಲ್ಪೆ ಅವರು 10 ಫೀಟ್ ನೀರಿನಾಳದಲ್ಲಿ ಮುಳುಗಿದ್ದ ಬಹು ದುಬಾರಿ ಐ-ಫೋನ್ ಅನ್ನು ಮೇಲೆತ್ತಿ ಫೋನಿನ ಮಾಲಕರಿಗೆ ಹಸ್ತಾಂತರಿಸಿದ್ದಾರೆ. ಮಲ್ಪೆ ದಕ್ಕೆ ಬಳಿ ಈ ಘಟನೆ ನಡೆದಿದ್ದು, ವ್ಯಾಪಾರಸ್ಥರೊಬ್ಬರ 1.5 ಲಕ್ಷದ ಐ-ಫೋನ್ ಒಂದು ನೀರಿಗೆ ಬಿದ್ದಿದ್ದು, ಅದರಲ್ಲಿ ಹಲವು ಪ್ರಮುಖ ಕಡತಗಳಿದ್ದವು ಎನ್ನುವ ಕಾರಣಕ್ಕೆ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಫೋನ್ ಅನ್ನು ನೀರಿನಿಂದ ಮೇಲೆತ್ತಿ ಕೊಡುವಂತೆ ಮನವಿ ಮಾಡಿದ್ದರು. […]