ಜಿಲ್ಲಾ ಮಲೆಕುಡಿಯ ಸಂಘ: ಈದು ಗ್ರಾಮ ಸಮಿತಿ ಅಧ್ಯಕ್ಷರಾಗಿ ಸದಾನಂದ ಗೌಡ ಕೇರ, ಪ್ರ. ಕಾರ್ಯದರ್ಶಿಯಾಗಿ ಸಂತೋಷ್ ಗೌಡ
ಕಾರ್ಕಳ: ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ಗ್ರಾಮ ಸಮಿತಿ ಈದು ಇದರ ಮಾಸಿಕ ಸಭೆಯು ಆ. 23ರಂದು ಈದು ಮಲ್ಲಂಜ ಅಂಗನವಾಡಿ ಕೇಂದ್ರದ ವಠಾರದಲ್ಲಿ ಜರಗಿತು. ಮಲೆಕುಡಿಯ ಸಂಘ ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷ ಪ್ರಶಾಂತ್ ಹೆರ್ಮುಂಡೆ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಸಮಿತಿಯನ್ನು ಪುನಾರಚಿಸಲಾಯಿತು. ಅಧ್ಯಕ್ಷರಾಗಿ ಸದಾನಂದ ಗೌಡ ಕೇರ, ಉಪಾಧ್ಯಕ್ಷರಾಗಿ ಜಾನಕಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಗೌಡ ತಾರೆದಿಡ್ಡು, ಸಹ ಕಾರ್ಯದರ್ಶಿಯಾಗಿ ಲೀಲಾವತಿ ಬಾರೆ, ಕೋಶಾಧಿಕಾರಿಯಾಗಿ ಕುಮಾರಿ ವಿಜಯ ಮಠದಮನೆ, ಸಂಘಟನಾ ಕಾರ್ಯದರ್ಶಿಗಳಾಗಿ ಸುಕೇಶ್ ಗೌಡ […]