ಮೊದಲು ರಕ್ತದಾನ ಮಾಡಿ, ನಂತರ ಕೋವಿಡ್ ಲಸಿಕೆ ಪಡೆಯಿರಿ: ಕುಯಿಲಾಡಿ ಸುರೇಶ್ ನಾಯಕ್ ಕರೆ

ಉಡುಪಿ: ಕೇಂದ್ರ ಸರಕಾರದ ಆದೇಶದಂತೆ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ಪಡೆಯುವ ಅಭಿಯಾನ ಆರಂಭಗೊಳ್ಳಲಿದೆ. ಆದರೆ, ಕೋವಿಡ್ ಲಸಿಕೆ ಪಡೆದ ಬಳಿಕ ಮುಂದಿನ 28 ದಿನಗಳ ವರೆಗೆ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಕ್ತದ ಅಭಾವವನ್ನು ನೀಗಿಸುವ ಸದುದ್ದೇಶದಿಂದ 18 ವರ್ಷ ಮೇಲ್ಪಟ್ಟ ಯುವಜನರು ಕೋವಿಡ್ ಲಸಿಕೆ ಪಡೆಯುವ ಮೊದಲು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮನವಿ ಮಾಡಿದ್ದಾರೆ. ಕೋವಿಡ್ ಲಸಿಕೆ ಪಡೆದು ಕೊರೊನಾ ಮುಂಜಾಗ್ರತಾ […]