ಮಡದಿ ಮಕ್ಕಳ ಜೊತೆ ಸಂಕ್ರಾತಿ ಆಚರಿಸಿದ ರಾಕಿಂಗ್ ಸ್ಟಾರ್ ಯಶ್
ಹಾಸನದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ರಾಕಿಂಕ್ ಸ್ಟಾರ್, ರಾಕಿ ಭಾಯ್ ಖ್ಯಾತಿಯ ಚಿತ್ರನಟ ಯಶ್ ಸಂಕ್ರಾತಿ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ತಂದೆ, ತಾಯಿ, ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಜೊತೆಗೆ ಯಶ್ ಹಬ್ಬವನ್ನು ಆಚರಿಸಿದ್ದಾರೆ. ಈ ಚಿತ್ರಗಳನ್ನು ಅವರು ಟ್ವಿಟರ್ ನಲ್ಲಿಹಂಚಿಕೊಂಡಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವದ ಸಂಭ್ರಮ
ಉಡುಪಿ: ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವದ ಪರ್ವಕಾಲದಲ್ಲಿ ತೆಪ್ಪೋತ್ಸವ ಸಹಿತ ಮಕರಸಂಕ್ರಾಂತಿಯ ಮೂರು ರಥೋತ್ಸವದಲ್ಲಿ ಅಷ್ಟಮಠದ ಎಲ್ಲ ಯತಿಗಳು ಪಾಲ್ಗೊಂಡಿದ್ದರು.
ಕರಂಬಳ್ಳಿ ಅಯ್ಯಪ್ಪವೃತಧಾರಿಗಳಿಂದ ಶಬರಿಮಲೆ ಯಾತ್ರೆ
ಉಡುಪಿ: ಶ್ರೀ ವೆಂಕಟರಮಣ ದೇವಸ್ಥಾನ ವಠಾರದಲ್ಲಿ ಕರಂಬಳ್ಳಿ ಶ್ರೀ ಅಯ್ಯಪ್ಪ ಸ್ವಾಮೀ ಭಕ್ತ ವೃಂದದವರ ಶಬರಿಮಲೆ ಯಾತ್ರೆಯ ವಿಧಿವಿಧಾನಗಳು ಮಂಜುಗುರುಸ್ವಾಮಿ ನೇತೃತ್ವದಲ್ಲಿ ಜರುಗಿತು. ವಿಶೇಷ ಅಲಂಕಾರ, ಹೂವಿನ ಮಂಟಪದಲ್ಲಿ ಮಹಾಪೂಜೆ, ಇರುಮುಡಿ ಕಟ್ಟುವಿಕೆ, ಸಾರ್ವಜನಿಕ ಅನ್ನಸಂತರ್ಪಣೆ, ಧಾರ್ಮಿಕ ಪೂಜಾ ವಿಧಾನ ನಡೆಸಿದ ಬಳಿಕ ವೃತಧಾರಿಗಳು ಶಬರಿಮಲೆ ಯಾತ್ರೆಗೆ ತೆರಳಿದರು.