ಬೊರಿವಲಿ ಪಶ್ಚಿಮ: ಶ್ರೀ ಕ್ಷೇತ್ರ ಜಯರಾಜನಗರದ ಶ್ರೀಮಹಿಷಮರ್ಧಿನಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ

ಬೊರಿವಲಿ: ಉತ್ತರ ಮುಂಬಯಿ ಬೊರಿವಲಿ ಪಶ್ಚಿಮ ಪರಿಸರದ ಶ್ರೀ ಕ್ಷೇತ್ರ ಜಯರಾಜನಗರದ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಜರುಗುತ್ತಿರುವ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಜೂ. 1ರಂದು ಬೆಳಿಗ್ಗೆ ಶ್ರೀದೇವಿಯ ಸನ್ನಿಧಾನದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಯವರ ನೇತೃತ್ವದಲ್ಲಿ ಅಷ್ಟ ಬಂಧ ಬ್ರಹ್ಮಕಲಶ ಹಾಗೂ ಧಾರ್ಮಿಕ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿಯಿಂದ ಜರುಗಿತು. ಪೂಜಾ ವಿಧಿ ನೆರವೇರಿಸಿ ಕಲಶವುಗಳನ್ನು ಮೆರವಣಿಗೆ ಬಿರುದಾವಳಿಗಳ ಮೂಲಕ ಶ್ರೀ ಮಹಿಷಮರ್ಧಿನಿ ಆದಿ ಗಣಪತಿ ಮತ್ತು ಆಂಜನೇಯ ದೇವರಿಗೆ ಅಭಿಷೇಕ ಸಮರ್ಪಿಸಲಾಯಿತು. ಬಳಿಕ […]

ಕಡಿಯಾಳಿ ದೇಗುಲದಲ್ಲಿ ಶ್ರೀಮಹಿಷಮರ್ದಿನಿ ದೇವರ “ಶರಣು ಶ್ರೀದೇವಿ” ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ

ಉಡುಪಿ: ಬ್ರಹ್ಮಕಲಶೋತ್ಸವದ ಪ್ರಯುಕ್ತ ಡಾ. ವಿದ್ಯಾಭೂಷಣ ಕಂಠಸಿರಿಯಲ್ಲಿ ಹೊರಬಂದಿರುವ ಜಗನ್ಮಾತೆ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವರ “ಶರಣು ಶ್ರೀದೇವಿ “ಎಂಬ ಹಾಡಿನ ಗುಚ್ಛಗಳನ್ನು ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಯೂಟ್ಯೂನಲ್ಲಿ ಬಿಡುಗಡೆ ಮಾಡಲಾಯಿತು. ಶಾಸಕ ಕೆ ರಘುಪತಿ ಭಟ್ ಹಾಡನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಡಾ. ಕಟ್ಟೆ ರವಿರಾಜ್ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ನಾಗೇಶ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ನಿತ್ಯಾನಂದ ಕಾಮತ್, […]