ಮಹೀಂದ್ರಾ ಥಾರ್ ಎಸ್‌ಯುವಿಯ ಅರ್ಥ್ ಎಡಿಷನ್ ಬಿಡುಗಡೆ: 15.40 ಲಕ್ಷ ರೂ. ನಿಂದ ಆರಂಭ
ಭಾರತದ ದೇಶೀಯ ವಾಹನ ತಯಾರಿಕಾ ಸಂಸ್ಥೆಗಳ ದಿಗ್ಗಜ ಮಹೀಂದ್ರಾ ಆಂಡ್ ಮಹೀಂದ್ರಾ ತನ್ನ ಜನಪ್ರಿಯ ಥಾರ್ ಎಸ್‌ಯುವಿಯ ಅರ್ಥ್(Thar Earth) ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದು ಥಾರ್ ಡೆಸರ್ಟ್‌ನಿಂದ ಸ್ಫೂರ್ತಿ ಪಡೆದಿದೆ ಹಾಗೂ ಈ ಎಸ್‌ಯುವಿ ಡೆಸರ್ಟ್ ಫ್ಯೂರಿ ಸ್ಯಾಟಿನ್ ಮ್ಯಾಟ್ ಪೇಂಟ್ ಸ್ಕೀಮ್ ಅನ್ನು ಹೊಂದಿದೆ ಎಂದು ಮಹೀಂದ್ರಾ (Mahindra & Mahindra) ಹೇಳಿಕೊಂಡಿದೆ. ಥಾರ್ ಅರ್ಥ್ ಎಡಿಷನ್ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದ್ದು, ಇದರ ಎಕ್ಸ್ ಶೋರೂಮ್ ಬೆಲೆ 15.40 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. […]