ನಟ ಮಹೇಶ್ ಬಾಬ್ ಗೆ ಪಿತೃವಿಯೋಗ: ಒಂದೇ ವರ್ಷದಲ್ಲಿ ಕುಟುಂಬದ ಮೂವರ ಅಗಲಿಕೆ
ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ‘ಸೂಪರ್‌ಸ್ಟಾರ್’ ಎಂದೇ ಪರಿಚಿತರಾಗಿದ್ದ ಹಿರಿಯ ನಟ ಕೃಷ್ಣ ಅವರು ಆಸ್ಪತ್ರೆಗೆ ದಾಖಲಾದ ಒಂದು ದಿನದ ಬಳಿಕ ಮಂಗಳವಾರ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ಕೃಷ್ಣ ಜನಪ್ರಿಯ ನಟ ಮಹೇಶ್ ಬಾಬು ಅವರ ತಂದೆ. ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದರು ಮತ್ತು ಅದಕ್ಕೂ ಮುನ್ನ ಅವರ ಹಿರಿಯ ಸಹೋದರ ರಮೇಶ್ ಬಾಬು ಜನವರಿಯಲ್ಲಿ ನಿಧನರಾಗಿದ್ದಾರೆ. ಒಂದೇ ವರ್ಷದಲ್ಲಿ ಕುಟುಂಬದ ಮೂವರನ್ನು ಮಹೇಶ್ ಕಳೆದುಕೊಂಡಿದ್ದಾರೆ. ಘಟ್ಟನಾನೇನಿ ಶಿವರಾಮ ಕೃಷ್ಣ ಮೂರ್ತಿ […]
ನನ್ನನ್ನು ಅಫೋರ್ಡ್ ಮಾಡಲು ಬಾಲಿವುಡ್ ಗೆ ಸಾಧ್ಯವಿಲ್ಲ ಎಂದ ತೆಲುಗಿನ ಸೂಪರ್ ಸ್ಟಾರ್!! ಬಾಲಿವುಡ್ ಗೆ ನೋ ಎಂದ ಮಹೇಶ್ ಬಾಬು!
ನವದೆಹಲಿ: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು, ತಮ್ಮ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಮೇಜರ್’ ಚಿತ್ರದ ಟ್ರೇಲರ್ ಲಾಂಚ್‌ನಲ್ಲಿ ‘ಬಾಲಿವುಡ್‌ಗೆ ನನ್ನನ್ನು ಅಫೋರ್ಡ್ ಮಾಡಲು ಸಾಧ್ಯವಿಲ್ಲ, ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಹಿಂದಿ ಚಿತ್ರರಂಗದಿಂದ ಹಲವಾರು ಆಫರ್ ಗಳು ಬರುತ್ತಿದ್ದರೂ ತಾನದನ್ನು ತಿರಸ್ಕರಿಸುತ್ತಿದ್ದೇನೆ ಎಂದ ಬಾಬು, ತೆಲುಗು ನಟನಾಗಿ ತಾನು ಅನುಭವಿಸುವ ಸ್ಟಾರ್‌ಡಮ್ ಮತ್ತು ಪ್ರೀತಿ ಅಪಾರವಾಗಿರುವುದರಿಂದ ಇತರ ಚಲನಚಿತ್ರೋದ್ಯಮಗಳಲ್ಲಿ ಸಾಹಸ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಅವರು […]