ಮಾಹೆಯಲ್ಲಿ ಅಮೃತ ಯುವ ಕಲೋತ್ಸವ ಉದ್ಘಾಟನೆ
ಮಣಿಪಾಲ: ಮೂರು ದಿನಗಳ ಅಮೃತ ಯುವ ಕಲೋತ್ಸವವನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಡಾ.ಸಂಧ್ಯಾ ಪುರೇಚ ಮಂಗಳವಾರದಂದು ಉದ್ಘಾಟಿಸಿದರು. ಡಾ.ಎಚ್.ಎಸ್.ಬಲ್ಲಾಲ್, ಪ್ರೊ.ಎಂ.ಡಿ.ನಲಪಟ್, ಹೆಲೆನ್ ಆಚಾರ್ಯ ಮತ್ತು ಪ್ರೊ.ವರದೇಶ್ ಹಿರೇಗಂಗೆ ಉಪಸ್ಥಿತರಿದ್ದರು.
ಜ.30ರಿಂದ ಫೆ.1ರವರೆಗೆ ಮಾಹೆಯಲ್ಲಿ ಅಮೃತ ಯುವ ಕಲೋತ್ಸವ-ಸಾಂಸ್ಕೃತಿಕ ಉತ್ಸವ
ಮಣಿಪಾಲ: ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಸಹಯೋಗದೊಂದಿಗೆ ಭಾರತದ 75ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಮೂರು ದಿನಗಳ ಯುವ ಸಾಂಸ್ಕೃತಿಕ ಉತ್ಸವ – ‘ಅಮೃತ ಯುವ ಕಲೋತ್ಸವ’ವನ್ನು ಜನವರಿ 30, 31 ಮತ್ತು ಫೆಬ್ರವರಿ 1ರಂದು ಮಣಿಪಾಲದಲ್ಲಿ ವಿಭಿನ್ನ ರೀತಿಯಲ್ಲಿ ಆಯೋಜಿಸುತ್ತಿದೆ. ಭಾರತದಾದ್ಯಂತ 75ನೇ ಸ್ವಾತಂತ್ರೋತ್ಸವದ ವರ್ಷಾಚರಣೆಯ ಸರಣಿಯಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಇದು ಆಯೋಜಿಸಲ್ಪಡುತ್ತಿದೆ. ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಡಾ ಸಂಧ್ಯಾ ಪುರೇಚ […]
ಬಹು ಧಾರ್ಮಿಕ ಭಾರತದಲ್ಲಿ ಯಾವುದೇ ಒಂದು ಧರ್ಮ ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ: ಪ್ರೊ. ಕನುಂಗೋ
ಮಣಿಪಾಲ: ಭಾರತೀಯ ಪರಂಪರೆಯು ಬಹು-ಸಾಂಸ್ಕೃತಿಕ ಮತ್ತು ಬಹು-ಧಾರ್ಮಿಕವಾಗಿದ್ದು, ಯಾವುದೇ ಒಂದು ಧರ್ಮವು ಅದರ ಮೇಲೆ ಏಕಸ್ವಾಮ್ಯತ್ವವನ್ನು ಹೊಂದಲು ಸಾಧ್ಯವಿಲ್ಲ ಎಂದು ಜರ್ಮನಿಯ ಎರ್ಫರ್ಟ್ ವಿಶ್ವವಿದ್ಯಾಲಯದ ಫೆಲೋ ಪ್ರೊಫೆಸರ್ ಪ್ರಳಯ್ ಕನುಂಗೋ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಧರ್ಮ, ಪರಂಪರೆ ಮತ್ತು ಅಸ್ಮಿತೆಯ ಕುರಿತು ಅವರು ಮಾತನಾಡಿದರು. ಖಂಡಿತವಾಗಿಯೂ ಧರ್ಮ, ಪರಂಪರೆ ಮತ್ತು ಅಸ್ಮಿತೆ ಒಂದೇ ರೀತಿಯ ಪರಿಕಲ್ಪನೆಗಳು. ಆದಾಗ್ಯೂ, […]
ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಮಂದಿ ಶ್ರೇಷ್ಠ ಸಾಧಕರಿಗೆ ಹೊಸವರ್ಷ ಪ್ರಶಸ್ತಿ-2023 ಪ್ರದಾನ
ಮಣಿಪಾಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರೋಗ್ಯ ವಿಜ್ಞಾನ, ಬ್ಯಾಂಕಿಂಗ್ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಮಂದಿ ಸಾಧಕರಿಗೆ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಎಜುಕೇಶನ್ ಆ್ಯಂಡ್ ಮಣಿಪಾಲ್ ಗ್ರೂಪ್ ಇಂಡಿಯ, ಪ್ರೈ. ಲಿ., ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಮತ್ತು ಡಾ. ಟಿಎಂಎ ಪೈ ಫೌಂಡೇಶನ್ ಸಂಸ್ಥೆಗಳ ವತಿಯಿಂದ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿವ್ಯೂನಲ್ಲಿ ಜ. 14 ರಂದು ‘ಹೊಸವರ್ಷದ ಪ್ರಶಸ್ತಿ-2023’ ಪ್ರದಾನ ಮಾಡಿ […]
ನಾಳೆ ಮಣಿಪಾಲ ಎಂಡ್ ಪಾಯಿಂಟ್ ನಲ್ಲಿ ಯೋಗಥಾನ್ ಕಾರ್ಯಕ್ರಮ
ಮಣಿಪಾಲ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಯೋಗಥಾನ್ ಕಾರ್ಯಕ್ರಮವು ಜನವರಿ 15 ರಂದು ಬೆಳಗ್ಗೆ 7 ಗಂಟೆಗೆ ಮಣಿಪಾಲದ ಎಂಡ್ ಪಾಯಿಂಟ್‌ನಲ್ಲಿ ನಡೆಯಲಿದೆ. ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ.ರಘುಪತಿ ಭಟ್ […]