ಮಾಹೆ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಮುತಾಲಿಕ್ ಇವರಿಗೆ ಸರ್ ಸಿ.ವಿ. ರಾಮನ್ ಯಂಗ್ ಸೈಂಟಿಸ್ಟ್ ಸ್ಟೇಟ್ ಪ್ರಶಸ್ತಿ
![](https://udupixpress.com/wp-content/uploads/2023/03/mahe.png)
ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ನ ಪ್ರೊಫೆಸರ್ ಮತ್ತು ಫಾರ್ಮಾಸ್ಯೂಟಿಕ್ಸ್ ವಿಭಾಗದ ಮುಖ್ಯಸ್ಥ, ಡಾ. ಶ್ರೀನಿವಾಸ್ ಮುತಾಲಿಕ್ ಇವರಿಗೆ ಜೀವ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಸರ್ ಸಿ.ವಿ. ರಾಮನ್ ಯಂಗ್ ಸೈಂಟಿಸ್ಟ್ ಸ್ಟೇಟ್ ಪ್ರಶಸ್ತಿ ದೊರೆತಿದೆ. 2023 ರ ಮಾರ್ಚ್ 23 ರಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆಎನ್ ಟಾಟಾ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಡಾ ಶ್ರೀನಿವಾಸ್ ಮುತಾಲಿಕ್ ಪ್ರಶಸ್ತಿಯನ್ನು ಸ್ವೀಕರಿಸಿದರು. ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. […]
ಕೇಂದ್ರ ಬಜೆಟ್ ನಲ್ಲಿ ಪರಿಸರ ಅರ್ಥಶಾಸ್ತ್ರಕ್ಕೆ ನಿರೀಕ್ಷಿತ ಪ್ರಮಾಣದ ಬೆಂಬಲವಿಲ್ಲ: ಡಾ.ರೆಸ್ಮಿ ಭಾಸ್ಕರನ್
![](https://udupixpress.com/wp-content/uploads/2023/02/resmi.png)
ಮಣಿಪಾಲ: ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ “ಯೂನಿಯನ್ ಬಜೆಟ್ -2023” ಅನ್ನು ಪರಿಸರ ಅರ್ಥಶಾಸ್ತ್ರದ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಅದು ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ. ಬಜೆಟ್‌ನಲ್ಲಿ ಭರವಸೆ ನೀಡಿರುವ ಹಸಿರು ಬೆಳವಣಿಗೆಯು ಸದ್ಯದ ಪರಿಸರಕ್ಕೆ ಒದಗಿರುವ ಸವಾಲುಗಳನ್ನು ಎದುರಿಸಲು ಸಾಕಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞೆ ಮತ್ತು ಲೇಖಕಿ ಡಾ.ರೆಸ್ಮಿ ಭಾಸ್ಕರನ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ಆಶ್ರಯದಲ್ಲಿ ‘ಕೇಂದ್ರ ಬಜೆಟ್ ಮತ್ತು ಪರಿಸರ ಅರ್ಥಶಾಸ್ತ್ರ’ದ ಕುರಿತು ಎರಡು ಉಪನ್ಯಾಸಗಳನ್ನು ನೀಡಿ ಮಾತನಾಡಿದ ಡಾ.ರೆಸ್ಮಿ ಭಾಸ್ಕರನ್, […]
ಭಾವನೆಗಳ ಅಭಿವ್ಯಕ್ತಿಗೆ ಮಾತೃಭಾಷೆ ಸೂಕ್ತ: ಪ್ರೊ. ಪಿ. ಗಿರಿಧರ ಕಿಣಿ
![](https://udupixpress.com/wp-content/uploads/2023/02/mother-tongue-day.png)
ಮಣಿಪಾಲ: ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆಯಂಥ ಸೂಕ್ತ ಮಾಧ್ಯಮ ಮತ್ತೊಂದಿಲ್ಲ. ಪ್ರಸ್ತುತ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲೆಯ ಬೋಧನಾ ವಿಧಾನಕ್ಕೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಬಹುಭಾಷೆಯಲ್ಲಿ ಶಿಕ್ಷಣ ಒದಗಿಸುವ ಧ್ಯೇಯದೊಂದಿಗೆ ಆಚರಿಸುವ ಸಂಕಲ್ಪವನ್ನು ಯುನೆಸ್ಕೋ ಹೊಂದಿದೆ. ಈ ದಿನದಂದು ಸಾಹಿತ್ಯ- ಕಲೆಗಳಿಗೆ ಸಂಬಂಧಿಸಿದ ಅಂತರ್‌ಶಿಸ್ತೀಯ ಮಹತ್ತ್ವದ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿರುವುದು ಅರ್ಥಪೂರ್ಣ ಎಂದು ಮಣಿಪಾಲ್ ಅಕಾಡೆಮಿ ಹೈಯರ್ ಎಜುಕೇಶನ್‌ನ ರಿಜಿಸ್ಟ್ರಾರ್ ಪ್ರೊ. ಪಿ. ಗಿರಿಧರ ಕಿಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಹೆಯ […]
ರಾಷ್ಟ್ರೀಯ ಯುವ ಸಂಸತ್ ಉತ್ಸವ ಭಾಷಣ ಸ್ಪರ್ಧೆ: ಜಿಲ್ಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
![](https://udupixpress.com/wp-content/uploads/2023/02/yuva-sansad.png)
ಉಡುಪಿ: ಭಾರತದ ಗಣತಂತ್ರ ದಿವಸದ ಪ್ರಯುಕ್ತ ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಆನ್‌ಲೈನ್- ವರ್ಚುವಲ್ ಮೋಡ್‌ನಲ್ಲಿ ನಡೆದ ರಾಷ್ಟ್ರೀಯ ಯುವ ಸಂಸತ್ ಉತ್ಸವ -2023 ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಯ ವೈಕುಂಟ ಬಾಳಿಗ ಕಾನೂನು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ವಾಸುದೇವ ತಿಲಕ್ ಅವರು ‘ಭಾರತದಲ್ಲಿ ಮಹಿಳಾ ಸುರಕ್ಷತೆ – ಸವಾಲುಗಳು ಮತ್ತು ಪರಿಹಾರ’ ವಿಷಯದಲ್ಲಿ ದ್ವಿತೀಯ ಸ್ಥಾನ ಹಾಗೂ ಮಾಹೆ ಮಣಿಪಾಲದ ಸಮೂಹ ಸಂವಹನ ಮತ್ತು ಮಾಧ್ಯಮದ ವಿದ್ಯಾರ್ಥಿನಿ ಲೇರಿಸಾ ಡಿಸೋಜ ಅವರು ‘ಹವಾಮಾನ ಬದಲಾವಣೆ ಮತ್ತು […]
ಜಟಿಲ ಸಿದ್ದಾಂತಗಳಿಗೆ ಸಿಲುಕದೆ ಕಲೆಯನ್ನು ಆಸ್ವಾದಿಸಬೇಕು: ಡಾ.ಎಚ್.ಎಸ್.ಶಿವಪ್ರಕಾಶ್
![](https://udupixpress.com/wp-content/uploads/2023/02/amrit-kalotsav.png)
ಮಣಿಪಾಲ: ಜಟಿಲವಾದ ಸಿದ್ಧಾಂತಗಳ ಒಳಗೆ ಸಿಲುಕದೆ ಕಲೆಯನ್ನು ಕೇವಲ ಕಲಾ ಪ್ರಕಾರವಾಗಿ ಕಂಡು ಅದನ್ನು ಆಸ್ವಾದಿಸಬೇಕು ಎಂದು ಖ್ಯಾತ ಸಾಹಿತಿ-ಕವಿ-ವಿಮರ್ಶಕ ಡಾ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು. ಇತ್ತೀಚೆಗೆ ಮಣಿಪಾಲದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನ ಸಹಯೋಗದಲ್ಲಿ ‘ಅಮೃತ ಯುವ ಕಲೋತ್ಸವ’ದ ಅಂಗವಾಗಿ ಆಯೋಜಿಸಿದ್ದ ‘ಕಲಾವಿಮರ್ಶೆ’ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕಲಾವಿಮರ್ಶೆ ಎಂಬುದು ಕಲಾಸಿದ್ಧಾಂತಗಳ ಮೇಲೆಯೇ ಕಟ್ಟಲ್ಪಡುತ್ತಿದ್ದು, ಇದು ಕಲಾವಿಮರ್ಶೆಯ ಮೂಲ ಸಾರವನ್ನೇ […]