ಮಣಿಪಾಲ: ಮಣಿಪಾಲ ಆರೋಗ್ಯ ಕಾರ್ಡ್-2023 ನೋಂದಣಿ ಪ್ರಾರಂಭ
ಮಣಿಪಾಲ: ಮಣಿಪಾಲ ಆರೋಗ್ಯ ಸಮೂಹ ಸಂಸ್ಥೆಗಳ ಮಣಿಪಾಲ ಆರೋಗ್ಯ ಕಾರ್ಡ್-2023 ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಹೇಳಿದರು. ಅವರು ಮಂಗಳವಾರದಂದು ಮಣಿಪಾಲ ಆರೋಗ್ಯ ಕಾರ್ಡ್-2023 ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಡಾ. ಟಿ.ಎಂ.ಎ ಪೈ ಅವರ 125 ನೇ ಜನ್ಮ ದಿನಾಚರಣೆಯಂದು ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಸಮಾಜಕ್ಕೆ ಸುಲಭವಾಗಿ ಸೌಲಭ್ಯ […]
ಕೆಎಂಸಿ ಮಣಿಪಾಲದಲ್ಲಿ ವೈದ್ಯಕೀಯ ತಳಿಶಾಸ್ತ್ರ ವಿಭಾಗ ಉದ್ಘಾಟನೆ: ಜೆನೆಟಿಕ್ ಸಂಶೋಧನೆ ಮತ್ತು ರೋಗಿಗಳ ಆರೈಕೆಯಲ್ಲಿ ಮೈಲಿಗಲ್ಲು ಸ್ಥಾಪನೆ
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ತಳಿಶಾಸ್ತ್ರ ವಿಭಾಗವು(ಮೆಡಿಕಲ್ ಜೆನೆಟಿಕ್ಸ್) ತನ್ನ ಹೊಸ ಸೌಲಭ್ಯಗಳೊಂದಿಗೆ ಉದ್ಘಾಟನೆಗೊಂಡಿತು. ಇದು ಶಿಕ್ಷಣ, ಸಂಶೋಧನೆ ಮತ್ತು ರೋಗಿಗಳ ಆರೈಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. 12,000-ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಸೌಲಭ್ಯವು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ವೈದ್ಯಕೀಯ ತಳಿಶಾಸ್ತ್ರದಲ್ಲಿನ ನಾವೀನ್ಯತೆಗಾಗಿ ವಿಭಾಗದ ಸಮರ್ಪಣೆಯನ್ನು ಉದಾಹರಿಸುತ್ತದೆ. ಈ ವಿಭಾಗವು ಡಿಎಂ (ಮೆಡಿಕಲ್ ಜೆನೆಟಿಕ್ಸ್), ಎಂಎಸ್ಸಿ (ಜೆನೆಟಿಕ್ ಕೌನ್ಸೆಲಿಂಗ್), ಮತ್ತು ಡಾಕ್ಟರ್ ಆಫ್ ಫಿಲಾಸಫಿ ಪದವಿಗಳಂತಹ ವಿಶೇಷ ಕಾರ್ಯಕ್ರಮಗಳನ್ನು ನೀಡಲಿದೆ. ಎಂಎಸ್ಸಿ(ಜೆನೆಟಿಕ್ ಕೌನ್ಸೆಲಿಂಗ್) ಪಠ್ಯಕ್ರಮವು ಭಾರತದಲ್ಲಿ […]
ಸಂಚಾರಿ ಪೋಲೀಸ್ ಮತ್ತು ಚಾಲಕರಿಗೆ ತುರ್ತು ಪರಿಸ್ಥಿತಿ ಪ್ರಥಮ ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರ
ಮಣಿಪಾಲ: ಉಡುಪಿ ಜಿಲ್ಲಾ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (CCIF) ಮತ್ತು ಕೆಎಂಸಿ ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಟ್ರಾಫಿಕ್ ಪೊಲೀಸ್ ಮತ್ತು ಚಾಲಕರಿಗೆ ಪ್ರಥಮ ಪ್ರತಿಕ್ರಿಯೆ ನೀಡುವುದರ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಮೇ . 30 ರಂದು ಡಾ. ಟಿಎಂಎ ಪೈ ಹಾಲ್ ನಲ್ಲಿ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚಿಂದ್ರ ಭಾಗವಹಿಸಿ ಮಾತನಾಡಿ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ […]
ಇಂದು ರೇಡಿಯೊ ಮಣಿಪಾಲ ಚಿಣ್ಣರ ದನಿಯಲ್ಲಿ ಬಾಲ ಪ್ರತಿಭೆ ಹಂಸಿನಿ ಎಸ್ ಬಂಗೇರ ಬೈಲೂರು ಕಾರ್ಯಕ್ರಮ
ಮಣಿಪಾಲ: ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ಕೇಂದ್ರ ರೇಡಿಯೊ ಮಣಿಪಾಲ್ ಮತ್ತು ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಯೋಗದಲ್ಲಿ ‘ಚಿಣ್ಣರ ದನಿ’ ಕಾರ್ಯಕ್ರಮವು ಇಂದು ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕಾರ್ಯಕ್ರಮದ ಮರುಪ್ರಸಾರ ಮೇ 4 ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಇಂದು ಪ್ರಸಾರವಾಗುವ ಕಾರ್ಯಕ್ರಮದ 7 ನೇ ಸಂಚಿಕೆಯಲ್ಲಿ ಬಾಲ ಪ್ರತಿಭೆ ಹಂಸಿನಿ ಎಸ್ ಬಂಗೇರ ಬೈಲೂರು ಭಾಗವಹಿಸಲಿದ್ದಾರೆ ಎಂದು ರೇಡಿಯೊ ಮಣಿಪಾಲದ ಪ್ರಕಟಣೆ ತಿಳಿಸಿದೆ.
ಮಣಿಪಾಲ: ಮಾಹೆ ಪರಿಸರಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ
ಮಣಿಪಾಲ: ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮಂಗಳವಾರದಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಎಂಐಟಿ ಮಣಿಪಾಲ, ಪಾಲಿಟೆಕ್ನಿಕ್ ಕಾಲೇಜು, ಮಣಿಪಾಲ್ ಪ್ರೆಸ್ ಮತ್ತು ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಭೇಟಿ ನೀಡಿ ಮತಯಾಚಿಸಿದರು. ರಘುಪತಿ ಭಟ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.