ಮಾಹೆ ಗಾಂಧಿಯನ್ ಸೆಂಟರ್ ನಿಂದ ಡಾ.ಟಿ.ಎಂ.ಎ ಪೈ ಅವರ 125ನೇ ಜನ್ಮದಿನ ಆಚರಣೆ
ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವತಿಯಿಂದ ಆಧುನಿಕ ಮಣಿಪಾಲದ ನಿರ್ಮಾತೃ, ಶಿಕ್ಷಣ ತಜ್ಞ ಡಾ.ಟಿ.ಎಂ.ಎ ಪೈ ಅವರ 125ನೇ ಜನ್ಮಶತಮಾನೋತ್ಸವವನ್ನು ಮಣಿಪಾಲದ ಅಕಾಡೆಮಿ ಹೈಯರ್ ಪ್ರೈಮರಿ ಸ್ಕೂಲ್ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ಆಚರಿಸಲಾಯಿತು. ವಿದ್ಯಾರ್ಥಿಗಳನ್ನು ಡಾ.ಟಿ.ಎಂ.ಎ. ಪೈ ವಾಸಿಸುತ್ತಿದ್ದ ಸ್ಮೃತಿ ಭವನಕ್ಕೆ ಕರೆದೊಯ್ದು, ಸ್ಮೃತಿ ಭವನದಲ್ಲಿರುವ ಛಾಯಾಚಿತ್ರಗಳು, ವೃತ್ತಪತ್ರಿಕೆ ತುಣುಕುಗಳು ಮತ್ತು ಇತರ ಆರ್ಕೈವಲ್ ವಸ್ತುಗಳ ಮೂಲಕ ಡಾ ಪೈ ಅವರ ಜೀವನ ಮತ್ತು ಬದುಕನ್ನು ಅವರಿಗೆ […]
ಮಾಹೆ ಗಾಂಧಿಯನ್ ಸೆಂಟರಿನಲ್ಲಿ ‘ಗಾಂಧಿಯ ವಿಶ್ವಾತ್ಮಕ ದೃಷ್ಟಿಕೋನ’ ಕುರಿತು ವಿಶೇಷ ಉಪನ್ಯಾಸ
ಮಣಿಪಾಲ: ಸಂವಾದದ ಮೂಲಕ ಸಂಘರ್ಷದ ಪರಿಹಾರವು ಈ ಸಮಯದ ಅಗತ್ಯವಾಗಿದೆ, ಇದು ಮಹಾತ್ಮ ಗಾಂಧಿಯವರ ಮಹತ್ವದ ಪುಟ್ಟ ಪುಸ್ತಕವಾದ ‘ಹಿಂದ್ ಸ್ವರಾಜ್’ ನಲ್ಲಿ ಚೆನ್ನಾಗಿ ಪ್ರತಿಫಲಿಸುತ್ತದೆ ಎಂದು ರಾಜಕೀಯ ಶಾಸ್ತ್ರಜ್ಞ ಡಾ ರಾಜಾರಾಮ್ ತೋಳ್ಪಾಡಿ ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಉಡುಪಿ ರೋಟರಿ ಕ್ಲಬ್ ಮತ್ತು ಯುನೆಸ್ಕೋ ಪೀಸ್ ಚೇರ್ ಜಂಟಿಯಾಗಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ‘ಗಾಂಧಿಯ ವಿಶ್ವಾತ್ಮಕ ದೃಷ್ಟಿಕೋನ’ ಎಂಬ ವಿಷಯದ ಕುರಿತು ವಿಶೇಷ […]
ಫೆ. 11 ರಂದು 6 ನೆಯ ಮಣಿಪಾಲ್ ಮ್ಯಾರಥಾನ್ ಆಯೋಜನೆ
ಮಣಿಪಾಲ: ಜೀವನ್ಮರಣ (ಪ್ರಾಣಾಂತಿಕ)ಸ್ಥಿತಿಯಲ್ಲಿರುವ ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರದ ಉದ್ದೇಶಿತ ಉದಾತ್ತ ಆಶಯದೊಂದಿಗೆ 6 ನೆಯ ಮಣಿಪಾಲ್ ಮ್ಯಾರಥಾನ್ ಅನ್ನು 2024 ರ ಫೆಬ್ರವರಿ 11 ರಂದು ಆಯೋಜಿಸಲಾಗುವುದು ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾಹಿತಿ ನೀಡಿದರು. ಅವರು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಲದ ಮ್ಯಾರಥಾನ್ ‘ಜೀವನ್ಮರಣ (ಪ್ರಾಣಾಂತಿಕ)ಕಾಯಿಲೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ [ಹಾಸ್ಪಿಸ್ ಕೇರ್] ಎಂಬ ಉದಾತ್ತ ಆಶಯವನ್ನು ಹೊಂದಿದೆ. ‘ನಾವು ನಿಮ್ಮ […]
ಮಾಹೆ: ವಿಶ್ವ ಶ್ವಾಸಕೋಶ ದಿನ- 2023 ಆಚರಣೆ
ಮಣಿಪಾಲ: ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP), ಮಾಹೆ ಮಣಿಪಾಲದ, ಉಸಿರಾಟದ ಚಿಕಿತ್ಸೆ ವಿಭಾಗವು ಶ್ವಾಸಕೋಶದ ಆರೋಗ್ಯ ಮತ್ತು ಉಸಿರಾಟದ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ “ವಿಶ್ವ ಶ್ವಾಸಕೋಶ ದಿನ- 2023” ವನ್ನು ಆಚರಿಸಿತು. ಉದ್ಘಾಟನೆಯು ಸೆಪ್ಟೆಂಬರ್ 22 ರಂದು ನಡೆಯಿತು. ಸೆಪ್ಟೆಂಬರ್ 23 ರಂದು ಸಮಾರೋಪ ನಡೆಯಿತು ಮಾಹೆ ಮಣಿಪಾಲದ ಎಂಸಿಒಪಿಎಸ್‌ನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಹೆ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ […]
ಮಾಹೆ : ‘ಸಾಮಾಜಿಕ ಪರಿವರ್ತನೆಯಲ್ಲಿ ಯುವಸಮುದಾಯ’ ಕುರಿತ 4ನೆಯ ರಾಷ್ಟ್ರೀಯ ಸಮಾವೇಶ
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಯೋಜಿಸಿದ ‘ಸಾಮಾಜಿಕ ಪರಿವರ್ತನೆಯಲ್ಲಿ ಯುವ ಸಮುದಾಯ- ಮಾಹೆಯ 4 ನೆಯ ರಾಷ್ಟ್ರೀಯ ಸಮಾವೇಶ’ ವು ಸೆಪ್ಟೆಂಬರ್ 17 ರಂದು ಸಂಪನ್ನಗೊಂಡಿತು. ದೇಶದ ವಿವಿಧ ಭಾಗಗಳಿಂದ ಸುಮಾರು 600 ಯುವನೇತಾರರು, ಪರಿವರ್ತನೆಯ ಹರಿಕಾರರು, ಸಾಮಾಜಿಕ ಬದಲಾವಣೆಯ ನಿರ್ಮಾರ್ತೃಗಳು ಮಂದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ‘ಯುವ ಸಮುದಾಯವು ಜಾಗತಿಕ ಪ್ರಭಾವ, ಸುಸ್ಥಿರ ಅಭಿವೃದ್ಧಿಯ ಗುರಿ (SDG) ಯ ವೇಗವಾಹಕ’ ಎಂಬುದು ಸಮಾವೇಶದ ಪ್ರಧಾನ ವಿಷಯವಾಗಿದ್ದು ಇದು G20ಯನ್ನು ಪ್ರತಿನಿಧಿಸುವ ಯೂತ್ 20 […]