ಮಾಹೆ ಮಣಿಪಾಲದ ಸಿಓಓ ಆಗಿ ಡಾ.ರವಿರಾಜ ಎನ್. ಎಸ್. ನೇಮಕ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ(ಮಾಹೆ) ನೂತನ ಮುಖ್ಯ ನಿರ್ವಹಣಾಧಿಕಾರಿಯಾಗಿ (ಸಿಓಓ) ಡಾ. ರವಿರಾಜ ಎನ್. ಎಸ್. ನೇಮಕಗೊಂಡಿದ್ದಾರೆ. ಅವರು ಇದುವರೆಗೆ ಮಾಹೆಯ ಯೋಜನೆ ಮತ್ತು ಮಾನಿಟರಿಂಗ್ ವಿಭಾಗದ ನಿರ್ದೇಶಕರಾಗಿದ್ದರು. ಮಾಹೆಯ ಶೈಕ್ಷಣಿಕೇತರ ಕ್ರಿಯಾತ್ಮಕ ವಿಭಾಗಗಳಾದ ಸಾಮಾನ್ಯ ಸೇವೆಗಳು, ಖರೀದಿ, ಯೋಜನೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ರೂಪಾಂತರ, ಮಾನವ ಸಂಪನ್ಮೂಲಗಳು, ಕಾನೂನು, ಕಾರ್ಪೊರೇಟ್ ಸಂಬಂಧಗಳು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ, ಹಾಸ್ಟೆಲ್‌ಗಳು ಮತ್ತು ಕ್ಯಾಂಪಸ್ ಸುರಕ್ಷತೆ ಇವುಗಳ ನಿರ್ವಹಣೆಯನ್ನು ಡಾ.ರವಿರಾಜ್ ನೋಡಿಕೊಳ್ಳಲಿದ್ದಾರೆ. ಡಾ.ರವಿರಾಜ ಅವರು […]