ಉಜ್ಜಯಿನಿಯಲ್ಲಿ ಮಹಾಕಾಲ್ ಲೋಕ್ ಕಾರಿಡಾರ್ 1 ನೇ ಹಂತವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಉಜ್ಜಯಿನಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಮಹಾಕಾಲ್ ಲೋಕ್ ಯೋಜನೆಯ ಮೊದಲ ಹಂತವನ್ನು ದೇಶಕ್ಕೆ ಸಮರ್ಪಿಸಿದರು. ಮಹಾಕಾಲ್ ದೇವಸ್ಥಾನದಲ್ಲಿ ಪೂಜೆ ನಡೆಸಿ ಆರತಿಯನ್ನು ಬೆಳಗಿದರು. ಉದ್ಘಾಟನಾ ಸಮಾರಂಭದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಉಜ್ಜಯಿನಿಯು ಸಾವಿರಾರು ವರ್ಷಗಳಿಂದ ಭಾರತದ ಸಂಪತ್ತು ಮತ್ತು ಸಮೃದ್ಧಿ, ಜ್ಞಾನ ಮತ್ತು ಘನತೆ, ನಾಗರಿಕತೆ ಮತ್ತು ಸಾಹಿತ್ಯವನ್ನು ಮುನ್ನಡೆಸಿದೆ. ಉಜ್ಜಯಿನಿಯ ಪ್ರತಿಯೊಂದು ಕಣವೂ ಆಧ್ಯಾತ್ಮಿಕತೆಯಲ್ಲಿ ಮುಳುಗಿದೆ ಮತ್ತು ಅದು ಪ್ರತಿ ಮೂಲೆ ಮೂಲೆಯಲ್ಲಿಯೂ ಅಲೌಕಿಕ […]