ಮಹಾ ಮಾಯಾ ಭಜನಾ ಮಂಡಳಿ 15ನೇ ವಾರ್ಷಿಕೋತ್ಸವ: ವಿಶ್ರಾಂತಿಧಾಮ ಆಶ್ರಮದಲ್ಲಿ ಭಜನಾ ಕಾರ್ಯಕ್ರಮ
ಮಣಿಪಾಲ: ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ ಇವರ ಸಂಯೋಜನೆಯಲ್ಲಿ ಮಹಾ ಮಾಯಾ ಭಜನೆ ಮಂಡಳಿಯ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರದಂದು ಸಂಜೆ 4 ಗಂಟೆಯಿಂದ 6ಗಂಟೆ ತನಕ ವಿಶ್ರಾಂತಿಧಾಮ ಆಶ್ರಮ ಆದರ್ಶ್ ನಗರ ಮಣಿಪಾಲದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು. ಆಶ್ರಮದ ಪ್ರಮುಖರಾದ ಗಣಪತಿ ನಾಯಕ್ ಮಂಚಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ನಗರಸಭಾಧ್ಯಕ್ಷೆ ಸುಮಿತ್ರ ನಾಯಕ್, ರಾಷ್ಟ್ರಿಯ ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ರೀಮತಿ ಶಾಮಲಾ ಕುಂದರ್ , ಈಶ್ವರ ನಗರ […]