ಬಂಟಕಲ್ಲು ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗೆ ವಿ.ವಿ. ಚಿನ್ನದ ಪದಕ

ಉಡುಪಿ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್‌ ವಿಭಾಗದ 2014-18ನೇ ಸಾಲಿನ ವಿದ್ಯಾರ್ಥಿ ಅವಿನಾಶ್‌ ಎಸ್‌. ಶೆಟ್ಟಿ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಡೆಸಿದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ಚಿನ್ನದ ಪದಕ ಗಳಿಸಿದ್ದಾರೆ. ಪ್ರಶಸ್ತಿಯನ್ನು ಎಸ್‌. ಎಂ. ಪಂಚಗಟ್ಟಿ ಅವರು ಸ್ಥಾಪಿಸಿದ್ದು, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಅಭ್ಯಾಸ ಮಾಡಿದ ಸರಕಾರಿ/ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ ನೀಡಲಾಗುತ್ತಿದೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬಂದಿ ವರ್ಗ […]

ಶಿರ್ವ: ಬಂಟಕಲ್ಲು ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ: ಪ್ರಸ್ತುತ ಕಾಲಘಟ್ಟದಲ್ಲಿ ಹಲ್ಲಿನ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿದ್ದು ವಿಶೇಷವಾಗಿ ದವಡೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾದಾಗ ಶಸ್ತ್ರಚಿಕಿತ್ಸೆ ನಡೆಸಬೇಕಾದ ಸಂದರ್ಭದಲ್ಲಿ ದಂತ ವೈದ್ಯರು ಸಾಮಾನ್ಯವಾಗಿ ದೋಷಪೂರಿತ ದವಡೆಯ ಸಿ.ಟಿ. ಸ್ಕ್ಯಾನ್‌ ಅಥವಾ ಸಿ.ಬಿ. ಸ್ಕ್ಯಾನ್‌ ಮೂಲಕ ದವಡೆಯ ಚಿತ್ರಣವನ್ನು ಪಡೆಯುತ್ತಿದ್ದರು. ಇದರ ಆಧಾರದಲ್ಲಿ ರೋಗಗ್ರಸ್ತ ಭಾಗಗಳನ್ನು ನಿರ್ಧರಿಸಿ, ಬಳಿಕ ಶಸ್ತ್ರಚಿಕಿತ್ಸೆ ಮಾಡಬೇಕಾದುದರಿಂದ ದವಡೆಯ ಸರ್ಜರಿ ಪೂರ್ಣಗೊಳಿಸಲು ಅಧಿಕ ಸಮಯ ಬೇಕಾಗುತ್ತಿತ್ತು. ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಚೈತ್ರಾ ಪೈ, ಮಹಿಮಾ […]