ಗುಡ್ಡ ಪಾಣಾರ ಮತ್ತು ಎಂ.ಎ.ನಾಯಕ್ ರವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಕೆ
ಉಡುಪಿ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಾನಪದ ಕ್ಷೇತ್ರದಲ್ಲಿ ದೈವ ನರ್ತಕರಾದ ಗುಡ್ಡ ಪಾಣಾರ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಎ.ನಾಯಕ್ ಆಯ್ಕೆಯಾಗಿದ್ದು, ಇವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾರವರು ಸಾಧಕರ ನಿವಾಸಕ್ಕೆ ತೆರಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಅಭಿನಂದಿಸಿದರು.