ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ: ಜುಲೈ 13 ರಂದು ಉಡಾವಣೆ ಸಾಧ್ಯತೆ; ಆಗಸ್ಟ್ ನಲ್ಲಿ ಚಂದನ ದಕ್ಷಿಣ ಧ್ರುವದ ಮೇಲೆ ಪಾದಾರ್ಪಣೆ!!

ಶ್ರೀಹರಿಕೋಟಾ: ಭಾರತದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರಯಾನ 3 ಮಿಷನ್ ಪ್ರಸ್ತುತ ಜುಲೈ 13 ರಂದು 9:00 UT (ಭಾರತದ ಪ್ರಮಾಣಿತ ಸಮಯ ಮಧ್ಯಾಹ್ನ 2:30) ಕ್ಕೆ ಉಡಾವಣೆಗೊಳ್ಳುವ ಸಾಧ್ಯತೆ ಇದೆ. ಜುಲೈ 19 ರವರೆಗಿನ ಬಫರ್ ಸಮಯವನ್ನು ನಿಗದಿಪಡಿಸಲಾಗಿದೆ. ಇಂದು ಮುಂಜಾನೆ, SDSC-SHAR ನಲ್ಲಿ, LVM3 M4 ವಾಹನವು ಚಂದ್ರಯಾನ-3 ನೊಂದಿಗೆ ಉಡಾವಣಾ ಪ್ಯಾಡ್‌ಗೆ ತನ್ನ ಚಲನೆಯನ್ನು ಪ್ರಾರಂಭಿಸಿದೆ. pic.twitter.com/7V6nHsxE5V — ISRO […]