ನ.1 ರಿಂದ ವಿಮಾ ಪಾಲಿಸಿ, ಅಡುಗೆ ಅನಿಲ ಮತ್ತು ಜಿ.ಎಸ್.ಟಿ ರಿಟರ್ನ್ಸ್ ನಿಯಮಗಳಲ್ಲಿ ಆಗಲಿವೆ ಬದಲಾವಣೆಗಳು
ನವದೆಹಲಿ: ನವೆಂಬರ್ 1 ರಿಂದ ವಿಮಾ ಪಾಲಿಸಿ, ಅಡುಗೆ ಅನಿಲ ಮತ್ತು ಜಿ.ಎಸ್.ಟಿ ಗಳ ನಿಯಮಗಳು ಬದಲಾಗಲಿವೆ. ಈ ನಿಯಮಗಳು ಸಾಮಾನ್ಯ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಮತ್ತು ಇವುಗಳಲ್ಲಿ ಹೆಚ್ಚಿನವನ್ನು ಗ್ರಾಹಕರ ಅನುಕೂಲತೆಗಾಗಿ ಮಾಡಲಾಗಿದೆ. 1. ಜೀವವಿಮಾ ಪಾಲಿಸಿಗೆ ಕೆವೈಸಿ ಕಡ್ಡಾಯ ವಿಮಾ ನಿಯಂತ್ರಕ ಐ.ಆರ್.ಡಿ.ಎ.ಐ ಜೀವೇತರ(ನಾನ್-ಲೈಫ್) ವಿಮಾ ಪಾಲಿಸಿಗಳನ್ನು ಖರೀದಿಸಲು ಕೈವೈಸಿ ಅನ್ನು ಕಡ್ಡಾಯಗೊಳಿಸಿದೆ. ಇದುವರೆಗೆ ಜೀವ ವಿಮೆಗೆ ಮತ್ತು ಆರೋಗ್ಯ ಮತ್ತು ವಾಹನ ವಿಮೆಯಂತಹ ಜೀವೇತರ ವಿಮೆಯ ಸಂದರ್ಭದಲ್ಲಿ, ಒಂದು ಲಕ್ಷ […]