‘ಲಿಯೋ’ ದಳಪತಿ ವಿಜಯ್​ ನಟನೆಯ ಚಿತ್ರದ ಕನ್ನಡ ಪೋಸ್ಟರ್​ ಔಟ್​

ಕಾಲಿವುಡ್​ ಸೂಪರ್​ಸ್ಟಾರ್​ ನಟ ದಳಪತಿ ವಿಜಯ್​ ಅವರ ‘ಲಿಯೋ’ 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಲೋಕೇಶ್​ ಕನಕರಾಜ್​ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ‘ಲಿಯೋ’ ಸಿನಿಮಾದ ಕನ್ನಡ ಪೋಸ್ಟರ್​ ಅನ್ನು ಅನಾವರಣಗೊಳಿಸಿದೆ. ‘ಲಿಯೋ’ ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್​ ಸ್ಕ್ರೀನ್​ ಸ್ಟುಡಿಯೋ ಪೋಸ್ಟರ್ ​ಅನ್ನು ಬಿಡುಗಡೆ ಮಾಡಿದೆ. “ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಸಂಚು ರೂಪಿಸಿ. #LeoPosterFeast ಕಥೆಗಳನ್ನು ಅನಾವರಣಗೊಳಿಸುತ್ತದೆ. ಒಂದು ಸಮಯದಲ್ಲಿ ಒಂದು ಪೋಸ್ಟರ್​. ಕನ್ನಡದಲ್ಲಿ ಲಿಯೋ ಭರ್ಜರಿ ರಿಲೀಸ್​” […]