ಬ್ರಹ್ಮಾವರ ಲಿಟ್ಲ್ ರಾಕ್ ಶಾಲೆ ಬಳಿ ನದಿಯಂತಾದ ರಸ್ತೆ: ಪರದಾಡುತ್ತಿರುವ ಪ್ರಯಾಣಿಕರು

ಉಡುಪಿ: ಬ್ರಹ್ಮಾವರದ ಲಿಟ್ಲ್ ರಾಕ್ ಶಾಲೆ ಬಳಿಯ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಪೂರ್ತಿ ಕೆಸರು ನೀರು ತುಂಬಿಕೊಂಡಿದ್ದು ಇದು ರಸ್ತೆಯೋ ಇಲ್ಲ ಹೊಳೆಯೋ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ಪ್ರಾಣ ಭಯದಲ್ಲಿ ಸಂಚರಿಸುವಂತಾಗಿದೆ. ಚಿತ್ರ ಕೃಪೆ: ರಾಜೇಶ್ ಪಾಟೀಲ್