ಲಯನ್ಸ್ ಕ್ಲಬ್ ವತಿಯಿಂದ ಮದರ್ ಥೆರೆಸಾ ಜನ್ಮ ದಿನಾಚರಣೆ
ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಮತ್ತು ಲಯನ್ಸ್ ಕ್ಲಬ್ ಮಣಿಪಾಲ್ ವ್ಯಾಲಿ ಇವರ ಸಹಯೋಗದೊಂದಿಗೆ ಆಗಸ್ಟ್ 27 ರಂದು ಪುರಭವನದಲ್ಲಿ ಮದರ್ ತೆರೇಸಾ ಅವರ 112ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸಾದ್ ನೇತ್ರಾಲಯದ ಡಾಕ್ಟರ್ ಮೈತ್ರಿ ತುಂಗಾ ಇವರು ಕಣ್ಣಿನ ಆರೈಕೆ, ಜಾಗರೂಕತೆ ಹಾಗೂ ನೇತ್ರ ದಾನದ ಬಗ್ಗೆ ವಿವರಿಸಿದರು. ಅಪಘಾತದಲ್ಲಿ ಕಾಲಿಗೆ ಏಟಾಗಿ ಚಿಕಿತ್ಸೆ ನಡೆಸುತ್ತಿರುವ ಕುಕ್ಕಿಕಟ್ಟೆಯ ಅಭಿಷೇಕ್ ಶೇಟ್ ಅವರ ತಾಯಿಗೆ ಸಹಾಯಧನವನ್ನು ಕ್ಲಬ್ಬಿನ ಪರವಾಗಿ ಪಿಡಿಜಿ ಲಯನ್ ಸುರೇಶ್ […]
ತ್ರಿಶಾ ವಿದ್ಯಾ ಕಾಲೇಜಿನ ವತಿಯಿಂದ ರಕ್ತದಾನ ಶಿಬಿರ
ಉಡುಪಿ: ತ್ರಿಶಾ ವಿದ್ಯಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ ಮತ್ತು ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಇದರ ಸಹಯೋಗದಲ್ಲಿ ರಕ್ತದಾನ ಶಿಬಿರವು ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ರಕ್ತದಾನ ಎನ್ನುವುದು ಜೀವ ಉಳಿಸುವ ಪ್ರಕ್ರಿಯೆಯಾಗಿದ್ದು, ಇಂತಹ ಶಿಬಿರಗಳು ಜನರಲ್ಲಿ ಮಾನವೀಯತೆಯನ್ನು ವೃದ್ಧಿಗೊಳಿಸುತ್ತವೆ ಎಂದರು. ಕಾರ್ಯಕ್ರಮದ ಅತಿಥಿಗಳಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಚೇರ್ಮನ್ ಎಸ್.ಜಯಕರ […]
ಹಿರಿಯಡ್ಕ: ಜುಲೈ 17 ರಂದು ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಹಿರಿಯಡ್ಕ: ಜುಲೈ 17 ಭಾನುವಾರದಂದು ಸಂಜೆ 7-00 ಗಂಟೆಗೆ ಲಯನ್ಸ್ ಕ್ಲಬ್ ಹಿರಿಯಡ್ಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹಿರಿಯಡ್ಕ ಪೊಲೀಸ್ ಸ್ಟೇಷನ್ ಎದುರು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದ ರಜತರಶ್ಮಿ ಆಡಿಟೋರಿಯಂನಲ್ಲಿ ಜರುಗಲಿದೆ. ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಎ ರವೀಂದ್ರನಾಥ್ ಹೆಗ್ಡೆ, ಲಯನ್ಸ್ ಕ್ಲಬ್ ಹರ್ಷ ಅಧ್ಯಕ್ಷೆ ಲ. ದೀಪ್ತಿ ಎನ್ ಶೆಟ್ಟಿ, ಪದಗ್ರಹಣಾಧಿಕಾರಿ ಡಾ. ನೇರಿ ಕಾರ್ನೆಲಿಯೋ ಹಾಗೂ ನಿಕಟಪೂರ್ವ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಖಜಾಂಜಿಗಳು ಉಪಸ್ಥಿತರಿರಲಿದ್ದಾರೆ.
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಉಡುಪಿ: ಲಯನ್ಸ್ ಜಿಲ್ಲೆ 317-C, ಪ್ರಾಂತ್ಯ VII ಹಾಗೂ ವಲಯ II ರ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ 4 ನೇ ಪದಗ್ರಹಣ ಸಮಾರಂಭ ಉದ್ಯಾವರದ ಸೈಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್ ನ ಝೇವಿಯರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ ಜಿಲ್ಲಾ 317 C ಯ ಪ್ರಥಮ ಜಿಲ್ಲಾ ಉಪ ಗವರ್ನರ್ ಲ. ಡಾ.ನೇರಿ ಕರ್ನೆಲಿಯೋ ಎಂಜೆಎಫ್ ಅವರು ಮಾತನಾಡಿ, ನಮ್ಮಲ್ಲಿ ಭರವಸೆ, ಧನಾತ್ಮಕ ಚಿಂತನೆ, ಆತ್ಮ ಗೌರವ, ಸ್ವಾಭಿಮಾನ […]
ಲಯನ್ಸ್ ಕ್ಲಬ್ ಬ್ರಹ್ಮಗಿರಿ ವತಿಯಿಂದ ವೈದ್ಯರ ದಿನಾಚರಣೆ್
ಉಡುಪಿ: ವೈದ್ಯರು ಮಾಡುವ ಸೇವೆ ಉದಾತ್ತ ಸೇವೆ ಎಂದು ಜನರು ಆಲೋಚಿಸುತ್ತಾರೆ. ಬೇರೆಯವರಿಗೆ ಉಪಕಾರ ಮಾಡುವುದೇ ಉದಾತ್ತ ಸೇವೆ. ಹೆಚ್ಚಿನ ವೈದ್ಯರು ತಮ್ಮ ಕೈಲಾದ ಪ್ರಯತ್ನ ಮಾಡಿ ರೋಗಿಗಳನ್ನು ಉಳಿಸುವ ಪ್ರಯತ್ನ ಮಾಡುತ್ತಾರೆ, ಆದರೆ ಇಂದಿನ ಯುಗದಲ್ಲಿ ವೈದ್ಯರನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ವೈದ್ಯರನ್ನು ಸನ್ಮಾನಿಸುವ ಈ ಸಂದರ್ಭದಲ್ಲಿ ನಮ್ಮ ಕರ್ತವ್ಯವನ್ನು ಇನ್ನೂ ಚೆನ್ನಾಗಿ ಮಾಡಬೇಕು, ಅದಕ್ಕೆ ಜನರ ಸಹಕಾರ ಬೇಕು ಎಂದು ಖ್ಯಾತ ವೈದ್ಯ ಡಾ.ಭಾಸ್ಕರಾನಂದ ಕುಮಾರ್ ಅವರು ಅಭಿಪ್ರಾಯಪಟ್ಟರು. ವೈದ್ಯ ದಿನಾಚರಣೆಯ ಅಂಗವಾಗಿ ಬ್ರಹ್ಮಗಿರಿಯ […]