ಸಾಯಿರಾದ ರೆಸಿಡೆನ್ಸಿಯಲ್ಲಿ ಸಾರ್ವಜನಿಕ ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಹಾಗೂ ಅಬಿ ನೇತ್ರ ಐಕೇರ್, ಓಕುಡೆ ಡೈಗ್ನೋಸ್ಟಿಕ್ ಸೆಂಟರ್ ಉಡುಪಿ ಹಾಗೂ ಸಾಯಿರಾಧಾ ರೆಸಿಡೆನ್ಸಿ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ನವಂಬರ್ 6 ರವಿವಾರದಂದು ಸಾಯಿರಾಧಾ ರೆಸಿಡೆನ್ಸಿ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಲಯನ್ ಉಮೇಶ್ ನಾಯಕ್, ಸೊಸೈಟಿಯ ಅಧ್ಯಕ್ಷ ಜಹೀರ್ ಅಲಿ, ಕಾರ್ಯದರ್ಶಿ ಜೀವನ್ ವಿಲಿಯಂ ಡಿಸೋಜ, ಡಾಕ್ಟರ್ ಅಭಿನಯ ಅಶೋಕ್ ಓಕುಡೆ ಮತ್ತು ಜಿಲ್ಲಾ ವಿಝನ್ ಕೇರ್ ಸಂಯೋಜಕ ಲಯನ್ ವಾದಿರಾಜ ರಾವ್ […]

ಕಡಲ ಸ್ವಚ್ಛತಾ ಅಭಿಯಾನ: ಬೆಂಗಳೂರಿನಿಂದ ಕೆಮ್ಮಣ್ಣಿಗೆ ಬೈಕ್ ಮೂಲಕ ಆಗಮಿಸಿ ಜಾಗೃತಿ ಮೂಡಿಸಿದ ಮಹಿಳಾ ಬೈಕರ್ ಗಳು

ಕೆಮ್ಮಣ್ಣು: ಕಡಲ ತೀರದ ರಕ್ಷಣೆ, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಸೇವ್ ಮರೈನ್ ಲೈಫ್’ ಬೈಕ್ ಯಾತ್ರೆಯ ಮೂಲಕ ಬೆಂಗಳೂರಿನ ಸ್ವಾತಿ ಆರ್ ಮತ್ತು ಅನಿತಾ ಎಂ ಮಂಗಳವಾರ ಹೂಡೆ ಕಡಲ ತೀರದಲ್ಲಿ ಜಾಗೃತಿ ಮೂಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಭಾರತ ಸರ್ಕಾರ, ನೆಹರು ಯುವ ಕೇಂದ್ರ ಉಡುಪಿ, ಸ್ವಚ್ಛ ಭಾರತ್ ಫ್ರೆಂಡ್ಸ್, ತೋನ್ಸೆ ಗ್ರಾಮ ಪಂಚಾಯತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.), ನಿರ್ಮಲ್ ತೋನ್ಸೆ, ಲಯನ್ಸ್ ಕ್ಲಬ್ […]

ಲಯನ್ಸ್ ಕ್ಲಬ್ ವತಿಯಿಂದ ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧಿ ಹಸ್ತಾಂತರ

ಹಿರಿಯಡ್ಕ: ಶನಿವಾರದಂದು ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ನಾಥ್ ಹೆಗ್ಡೆಯವರ ನೇತೃತ್ವದಲ್ಲಿ ಕ್ಲಬ್ಬಿನ ಸದಸ್ಯರು ಹಿರಿಯಡ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಮಾಜಿ ಜಿಲ್ಲಾ ಗವರ್ನರ್ ಎಂ.ಜೆ.ಎಫ್ ಲಯನ್ ವಿಶ್ವನಾಥ್ ಶೆಟ್ಟಿಯವರು ನೀಡಿದ ಮಾತ್ರೆಗಳು, ಟಾನಿಕ್, ಸಿರಪ್, ಮುಲಾಮ್ ಮತ್ತು ಇತರ ಔಷಧೀಯ ಪರಿಕರಗಳನ್ನು ಕ್ಲಬ್ಬಿನ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ಸತ್ಯಶಂಕರ್ ಸಿ ಎಚ್ ರವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಲಯನ್ ವಿಶ್ವನಾಥ್ ಶೆಟ್ಟಿಯವರು ಮಾತನಾಡಿ, ಈ ಹಿಂದೆ ಪ್ರಾಥಮಿಕ […]

ಅಮೃತ್ ಗಾರ್ಡನ್ ನಲ್ಲಿ ಲಯನ್ಸ್ ಕ್ಲಬ್ ಪ್ರಾಂತ್ಯ ಆರರ ಪ್ರಾಂತೀಯ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಪ್ರಪ್ರಥಮ ಬಾರಿಗೆ ಜಿಲ್ಲೆ 317 ಸಿ ಯಲ್ಲಿ ಪ್ರಾಂತ್ಯ ಆರರ ಪ್ರಾಂತೀಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಂತ್ಯ ಅಧ್ಯಕ್ಷ ಲಯನ್ ಹರಿಪ್ರಸಾದ್ ರೈ ಅವರ ಮುಂದಾಳತ್ವದಲ್ಲಿ ನೆರವೇರಿತು. ಪ್ರಾಂತ್ಯದ ಎಲ್ಲಾ ಕ್ಲಬ್ಬುಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರಸ್ತುತಪಡಿಸಲು ಇದೊಂದು ಒಳ್ಳೆಯ ಅವಕಾಶ, ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ನೇರಿ ಕರ್ನೆಲಿಯೋ ಹೇಳಿದರು. ಅವರು ಅಮೃತ್ ಗಾರ್ಡನ್ ನಲ್ಲಿ ಸೆ.10 ರಂದು ನಡೆದ ಪ್ರಾಂತ್ಯ ಆರರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. […]

ಉಡುಪಿ: ಸೆ.11 ರಿಂದ ಹಾಡು ನೀ ಹಾಡು ರಿಯಾಲಿಟಿ ಶೋ ನ ಆಡಿಷನ್ ಪ್ರಾರಂಭ

ಉಡುಪಿ: ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಅವಿಭಜಿತ ದ.ಕ ಜಿಲ್ಲೆಯ ಗಾನಕೋಗಿಲೆಗಳ ಪ್ರತಿಭೆ ಅನಾವರಣಗೊಳಿಸುವ ‘ಹಾಡು ನೀ ಹಾಡು’ ಸಂಗೀತ ರಿಯಾಲಿಟಿ ಶೋ ನ ಆಡಿಷನ್ ಸೆ.11 ರಿಂದ ಪ್ರಾರಂಭವಾಗಲಿದ್ದು, ಅಂದು ಬೆಳಿಗ್ಗೆ 8 ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಾಗೂ ಕುಂದಾಪುರದ ಆರ್.ಎನ್ ಶೆಟ್ಟಿ ಪಿಯು ಕಾಲೇಜಿನಲ್ಲಿ ನಡೆಯಲಿದೆ. ಸೆ. 18 ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯ, ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿ ಎಸ್ […]