ಏನಾದ್ರೂ ಬಾಕಿಯಿದ್ರೆ ಅದನ್ನು ಹೇಳಲಿ ಸಂತೋಷ: ಕುಮಾರಸ್ವಾಮಿಗೆ ಡಿಕೆಶಿ ಟಾಂಗ್
ಉಡುಪಿ: ನಮ್ಮ ಸರ್ಕಾರ ಬೀಳಲು ಡಿಕೆಶಿ ಕಾರಣ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿಯಲ್ಲಿ ಇಂದು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಏನು ಬೇಕಾದ್ರೂ ಮಾತಾನಾಡಲಿ. ಅವರು ಹಿರಿಯರು. ಇಷ್ಟು ಬೇಗ ಹೇಳ್ತಾ ಇದ್ದಾರಲ್ವಾ?. ಇನ್ನೂ ಏನಾದ್ರೂ ಬಾಕಿಯಿದ್ರೆ ಹೇಳಲಿ. ಅದೇ ಸಂತೋಷ ಎಂದು ವ್ಯಂಗ್ಯವಾಡಿದರು. ರಾಜ್ಯ ಸಂಪುಟ ವಿಸ್ತರಣೆ ಅವರ ಆಂತರಿಕ ವಿಚಾರ. ಕಾಂಗ್ರೆಸ್ ಪಕ್ಷಕ್ಕೂ ಬಿಜೆಪಿ ಆಂತರಿಕ ವಿಷಯಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು. ಲವ್ ಜಿಹಾದ್ ಕಾನೂನು ತರುವ ಮೊದಲು […]