ಮಾನಸಿಕ ಆರೋಗ್ಯದ ಬಗ್ಗೆ ಒಂದಷ್ಟು ತಿಳ್ಕೊಳ್ಳೋಣ ಬನ್ನಿ: ಇದು ವಿಶ್ವ ಮಾನಸಿಕ ಆರೋಗ್ಯ ದಿನದ ವಿಶೇಷ
–ಮಂಜುಳಾ ಜಿ “ಅಕ್ಟೋಬರ್ 10” ವಿಶ್ವವ್ಯಾಪಿ “ಮಾನಸಿಕ ಆರೋಗ್ಯ ದಿನಾಚರಣೆ”ಯನ್ನಾಗಿ ಆಚರಿಸಲಾಗುತ್ತಿದೆ, ಮಾನಸಿಕ ಆರೋಗ್ಯದ ಅರಿವು ನೀಡುವ ಕಾರ್ಯ ನಡೆಯುತ್ತಿದೆ ಹಲವು ವರ್ಷಗಳಿಂದ. ನಮ್ಮಲ್ಲಿ ದೈಹಿಕ ಆರೋಗ್ಯದ ಬಗ್ಗೆ ಇರುವಷ್ಟು ಕಾಳಜಿ, ಅರಿವು ಮಾನಸಿಕ ಆರೋಗ್ಯದ ಬಗ್ಗೆ ಇಲ್ಲದೆ ಇರುವುದರಿಂದ ಹಾಗೂ ನಮ್ಮ ಇತ್ತೀಚಿನ ದಿನಮಾನಗಳಲ್ಲಿ ಹುಟ್ಟಿಕೊಳ್ಳುತ್ತಿರುವ ಕೆಲವು ಸಮಸ್ಯೆಗಳು ಮಾನಸಿಕ ಆರೋಗ್ಯದ ಕುರಿತು ಜಾಸ್ತಿ ಗಮನ ನೀಡುವಂತೆ ಮಾಡಿದೆ. ನನ್ನ ವೃತ್ತಿಜೀವನದ ಅನುಭವದ ಮೇಲೆ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮೂಢನಂಬಿಕೆಗಳು ಬಲವಾಗಿರುತ್ತವೆ, […]