ಅಸಹಾಯಕರಿಗೆ, ಅಲೆಮಾರಿಗಳಿಗೂ ಕೋವಿಡ್ ಲಸಿಕೆ ಸಿಗುವಂತಾಗಲಿ: ನಾಗರಿಕ ಸಮಿತಿ ಆಗ್ರಹ

ಉಡುಪಿ: ಕೊರೊನಾ ವ್ಯಾಧಿ ದೇಶದಿಂದ  ಮುಕ್ತಗೊಳಿಸಲು ಕೋವಿಡ್ ಲಸಿಕೆ ಅಭಿಯಾನವು ಸರಕಾರದಿಂದ ಆರಂಭಗೊಂಡಿದೆ. ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು, ಲಸಿಕೆ ಪಡೆಯಬೇಕಾದ ವ್ಯಕ್ತಿ ಆಧಾರ್ ಚೀಟಿಯನ್ನು ತೊರ್ಪಡಿಸುವ ನಿಯಮ ಇದೆ. ನಿಯಮದಂತೆ ಲಸಿಕೆ ಪಡೆಯಲು ಅರ್ಹರಿರುವರು ಆಧಾರ್ ಚೀಟಿಯನ್ನು ಲಸಿಕಾ ಕೇಂದ್ರಗಳಲ್ಲಿ ತೋರ್ಪಡಿಸಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ವಲಸೆ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು, ಚಿಂದಿ ಆರಿಸುವವರು, ಭಿಕ್ಷುಕರು, ಬಸ್ಸು ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿರುವ ಅಸಹಾಯಕರು, ಹಾಗೂ ಅನಾಥಾಶ್ರಮಗಳಲ್ಲಿ ಆಶ್ರಯ ಪಡೆದಿರುವರು, ಇವರಲ್ಲಿ  […]