ಕಾರ್ಕಳ: ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಚಿರತೆ ಸಾವು
ಕಾರ್ಕಳ: ಕಾಡಿನ ಮಧ್ಯದಿಂದ ಹಠಾತ್ತನೆ ಚಿರತೆಯೊಂದು ರಸ್ತೆಗೆ ನುಗ್ಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆ ಪರಿಣಾಮ ಸಾವನಪ್ಪಿದೆ. ಘಟನೆಯು ಹೆಬ್ರಿ ತಾಲೂಕಿನ ಮುದ್ರಾಡಿ ಕಾರ್ಕಳ ರಸ್ತೆಯ ಭಕ್ರೆ ಮಠ ಕ್ರಾಸ್ ಬಳಿ ಗುರುವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಕಾರ್ಕಳದಿಂದ ಮುದ್ರಾಡಿ ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಕಾರು ರಸ್ತೆ ಕಡೆಗೆ ಹಠಾತ್ತಾಗಿ ನುಗ್ಗಿದ ಚಿರತೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ […]
ಪೆರ್ಡೂರು: ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ
ಪೆರ್ಡೂರು: ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದ್ದ ಹೆಣ್ಣು ಚಿರತೆಯೊಂದನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪೆರ್ಡೂರು ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ಚಿರತೆಯೊಂದು ಆತಂಕ ಸೃಷ್ಟಿಸಿತ್ತು. ಮೂರು ದಿನಗಳ ಹಿಂದಷ್ಟೇ ಚಿರತೆಯ ಮರಿಯೊಂದನ್ನು ಹಿಡಿದು ಆಗುಂಬೆ ಕಾಡಿನಲ್ಲಿ ಬಿಡಲಾಗಿತ್ತು. ಅದರ ತಾಯಿ ತನ್ನ ಮರಿಯನ್ನರಸಿಕೊಂಡು ಪೆರ್ಡೂರು ಪರಿಸರದಲ್ಲಿ ಅಡ್ಡಾಡುತ್ತಿತ್ತು. ಇದರಿಂದಾಗಿ ಇಲ್ಲಿನ ಪರಿಸರದ ಜನರಲ್ಲಿ ಆತಂಕ ಮನೆ ಮಾಡಿತ್ತು. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿದ್ದರು. ಇದೀಗ ಚಿರತೆಯು ಬೋನಿನೊಗಳೆ ಬಿದ್ದಿದ್ದು, […]
ಶಿರ್ವ: ಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆ ರಕ್ಷಣೆ
ಶಿರ್ವ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಪಾಡಿ ಪದವು ಬಳಿಯ ಅಶ್ವತ್ಥಕಟ್ಟೆ ಸಮೀಪ ಶಿರ್ವ-ಪಳ್ಳಿ ಮುಖ್ಯರಸ್ತೆಯ ಕಾಡಿನಲ್ಲಿ ತಂತಿ ಬೇಲಿಗೆ ಚಿರತೆಯೊಂದು ಸಿಲುಕಿ ಒದ್ದಾಡುತ್ತಿದ್ದು, ಇದನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದು ಇಲಾಖೆಯ ಅಧಿಕಾರಿಗಳ ತಂಡವು ಬುಧವಾರದಂದು ಚಿರತೆಯನ್ನು ರಕ್ಷಿಸಿದೆ. ತಂಡದಲ್ಲಿ ಪಡುಬಿದ್ರೆ ಉಪ ವಲಯಾರಣ್ಯಾಧಿಕಾರಿ ಗುರುರಾಜ್ ಕೆ., ಅರಣ್ಯ ರಕ್ಷಕ ಚರಣ್‌ರಾಜ್ ಜೋಗಿ, ಮಂಜುನಾಥ್ ನಾಯಕ್, ಕೇಶವ ಪೂಜಾರಿ, ವಾಹನ ಚಾಲಕ ಜೋಯ್ ಮುಂತಾದವರು ಇದ್ದರು. ಚಿರತೆಗೆ ಅರಿವಳಿಕೆ ಮದ್ದು ನೀಡಿ ರಕ್ಷಿಸಲಾಯಿತು.
ಪಾಳು ಬಿದ್ದ ಮನೆಯಲ್ಲಿ ಅಡಗಿದ್ದ ಚಿರತೆ ಸೆರೆ
ಉಡುಪಿ: ಇಲ್ಲಿನ ಪಾಳು ಬಿದ್ದಿದ್ದ ಮನೆಯೊಂದರಲ್ಲಿ ಅವಿತುಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇಲ್ಲಿನ ಜನಾಶ್ರಯವಿಲ್ಲದ ಮನೆಯಲ್ಲಿ ಚಿರತೆಯೊಂದು ಅಡಗಿಕೊಂಡಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಸಫಲರಾಗಿದ್ದರೆ. ಮಣಿಪಾಲ, ಸರಳೇಬೆಟ್ಟು ಪರಿಸರದಲ್ಲಿ ಹಲವು ದಿನಗಳಿಂದ ಚಿರತೆ ಓಡಾಟ ಕಂಡುಬಂದಿದ್ದು, ಸ್ಥಳೀಯರು ರಾತಿವೇಳೆ ಓಡಾಡಲು ಭಯಪಡುವಂತಾಗಿದೆ.