ಎಡಪಂಥೀಯ ಉಗ್ರವಾದದ ಪ್ರಮಾಣದಲ್ಲಿ ಗಣನೀಯ ಇಳಿಕೆ: ಉಗ್ರವಾದದ ವಿರುದ್ದ ಶೂನ್ಯ ನೀತಿಗೆ ದೊರೆತ ಫಲ
ನವದೆಹಲಿ: ಮೂರು ದಶಕಗಳಿಂದ ಮಾವೋವಾದಿಗಳ ಭದ್ರಕೋಟೆಯಾಗಿದ್ದ ಜಾರ್ಖಂಡ್‌ನ ಬುಧಾ ಪಹಾಡ್ ಅನ್ನು ಇದೀಗ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ ಮತ್ತು ಭದ್ರತಾ ಪಡೆಗಳ ಶಾಶ್ವತ ನೆಲೆಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲದೀಪ್ ಸಿಂಗ್ ಹೇಳಿದ್ದಾರೆ. ಎಡಪಂಥೀಯ ಉಗ್ರವಾದದ ವಿರುದ್ಧ (ಎಲ್‌ಡಬ್ಲ್ಯುಇ) ಭದ್ರತಾ ಪಡೆಗಳು ಸಾಧಿಸಿದ ಯಶಸ್ಸಿನ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಭದ್ರತಾ ಪಡೆಗಳ ಶಿಬಿರಗಳನ್ನು ಸ್ಥಾಪಿಸಲು ಮತ್ತು ಪ್ರದೇಶವನ್ನು ನಿಯಂತ್ರಣಕ್ಕೆ ತರಲು ಈ ವರ್ಷದ ಏಪ್ರಿಲ್‌ನಿಂದ ಬುಧಾ ಪಹಾಡ್‌ನಲ್ಲಿ […]