ಜ.8 ರಂದು ರಾಜ್ಯಮಟ್ಟದ ಕಂಬಳ ಕ್ರೀಡೋತ್ಸವಕ್ಕೆ ಚಾಲನೆ: ಸುನಿಲ್ ಕುಮಾರ್
ಜ.8 ರಂದು ಕಾರ್ಕಳದ ಮಿಯಾರಿನಲ್ಲಿ 19 ನೇ ವರ್ಷದ ಲವಕುಶ ಜೋಡುಕರೆ ಕಂಬಳ ನಡೆಯಲಿದ್ದು, ಅಂದು ನೂತನ ಸಭಾ ವೇದಿಕೆಯ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಕಂಬಳ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಮಿಯಾರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಸಭಾವೇದಿಕೆಯು ನಿರ್ಮಾಣವಾಗಿದ್ದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಇದರ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ಸಚಿವರು ಮತ್ತು ಕೇಂದ್ರ […]