ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ: ಘನ ವಾಹನ ಸಂಚಾರ ನಿಷೇಧ
ಸಕಲೇಶಪುರ: ಭಾರೀ ಮಳೆಯಿಂದಾಗಿ ಪಶ್ಚಿಮ ಘಟ್ಟದ ಘಾಟಿಗಳು ಕುಸಿಯುತ್ತಿದ್ದು, ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಮಾರ್ಗದಲ್ಲಿ ಘನ ವಾಹನಗಳ ಸಂಚಾರವನ್ನು ನಿಸೇಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ತಿಳಿಸಿದ್ದಾರೆ. ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ಒಂದು ವಾರದ ಹಿಂದೆ ರಸ್ತೆ ಸ್ವಲ್ಪ ಕುಸಿದಿತ್ತು. ವಿಚಾರ ತಿಳಿದ ಲೋಕೋಪಯೋಗಿ ಇಲಾಖೆ ಸಚಿವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದಾದ ನಾಲ್ಕನೇ ದಿನಕ್ಕೆ ಭೂಕುಸಿತವಾಗಿದೆ.
ಅಂಕೋಲಾದಲ್ಲಿ ಕೊಚ್ಚಿ ಹೋದ ಸೇತುವೆ, ಸಂಪಾಜೆಯಲ್ಲಿ ಶಾಲೆ ಮೇಲೆ ಗುಡ್ಡ ಕುಸಿತ
ಕೊಡಗು: ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ, ಕೃತಕ ನೆರೆ, ಮನೆಗಳೌ ಜಲಾವೃತವಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಕೊಯನಾಡು ಪ್ರಾಥಮಿಕ ಶಾಲೆಯ ಹಿಂಬದಿಯಲ್ಲಿ ಗುಡ್ಡ ಕುಸಿದಿದ್ದರೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಗುಳ್ಳಾಪುರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಆರಂಭಿಕ ಮಳೆಗೆ ಕೊಚ್ಚಿ ಹೋಗಿದೆ. https://twitter.com/i/status/1546072884379979777 ಕೃಪೆ: ಕರ್ನಾಟಕ ರೈನ್ಸ್