ಚೀನಾ ಮೇಲೆ ಹದ್ದಿನ ಕಣ್ಣು: ಇದೇ ಮೊದಲ ಬಾರಿಗೆ 3ಡಿ-ಮುದ್ರಿತ ಬಂಕರ್ ನಿರ್ಮಿಸಲಿರುವ ಭಾರತೀಯ ಸೇನೆ

ಲಡಾಕ್: ಕಳೆದ ಎರಡು ವರ್ಷಗಳಿಂದ ಭಾರತ-ಚೀನಾ ಗಡಿ ಬಿಕ್ಕಟ್ಟು ಮುಂದುವರಿದಿದ್ದು, ಶತ್ರುಗಳೊಂದಿಗೆ ಸೆಣಸಾಡಲು ಮತ್ತು ಯಾವುದೇ ಸಮಯದಲ್ಲಿ ಯಾವುದೇ ವಿಷಮ ಪರಿಸ್ಥಿತಿಗೆ ಸಿದ್ಧರಾಗಿರಲು ಭಾರತೀಯ ಸೇನೆಯು ಲೈನ್ ಆಫ್ ಆಕ್ಚುವಲ್ ಕಂಟೋಲ್(ಎಲ್.ಎ.ಸಿ)ನಲ್ಲಿ ಪ್ರಮುಖ ಮೂಲಸೌಕರ್ಯ ನಿರ್ಮಾಣ ಯೋಜನೆಯನ್ನು ರೂಪಿಸಿದೆ. ಭಾರತೀಯ ಸೇನೆಯು ಚೀನಾದ ಎದುರು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ 450 ಟ್ಯಾಂಕ್‌ಗಳು ಮತ್ತು 22000 ಕ್ಕೂ ಹೆಚ್ಚು ಸೈನಿಕರಿಗೆ ವಸತಿಗಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲಿದೆ ಎಂದು ವರದಿಯಾಗಿದೆ. ಸೇನೆಯು 3ಡಿ-ಮುದ್ರಿತ ಶಾಶ್ವತ ರಕ್ಷಣೆಗಳನ್ನು ನಿರ್ಮಿಸಲಿದೆ. ಲಡಾಕ್ ನಲ್ಲಿ ಭಾರತೀಯ […]

ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ: ಸಿಂಧೂ ನದಿಗೆ ಸೇತುವೆ ಕಟ್ಟಿದ ಸಪ್ತ ಶಕ್ತಿ ಇಂಜಿನಿಯರ್ ಗಳ ಅಸಾಮಾನ್ಯ ಸಾಧನೆ

ಲಡಾಕ್: ಬಾನೆತ್ತರದ ಗಿರಿ ಶಿಖರದ ಮೇಲೆ, ಆಳವಾದ ಸಮುದ್ರ, ಕೊರಕಲು ಭೂಪ್ರದೇಶ, ದೊಡ್ಡ ಬಂಡೆಕಲ್ಲಿರಲಿ ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೆಂದರೆ ಹಾಗೆ; ರಸ್ತೆ, ಸೇತುವೆ, ರೈಲ್ವೆ ಲೈನ್ ಹೀಗೆ ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಭಾರತೀಯ ಸೇನೆಯು ಲಡಾಖ್‌ನಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದೆ. ಸೇತುವೆಯು ಭಾರತೀಯ ಸೇನೆಯ ಪ್ರಭಾವಶಾಲಿ ಎಂಜಿನಿಯರಿಂಗ್ ಕೌಶಲ್ಯಗಳನ್ನು ಜಗತ್ತಿಗೆ ಪ್ರದರ್ಶಿಸುತ್ತಿದೆ. ಸಪ್ತ ಶಕ್ತಿ ಇಂಜಿನಿಯರ್ ಗಳು ನಿರ್ಮಾಣ ಮಾಡಿರುವ ಈ ಸೇತುವೆ ಇಂಜಿನಿಯರಿಂಗ್ ಲೋಕದ ಅದ್ಭುತವೆನಿಸಿದೆ. “ಸೇತುವೆ ಸವಾಲುಗಳು […]