ಕಾರ್ಮಿಕ ಕಲ್ಯಾಣ ಸುಂಕ ಪಾವತಿ: ಖಾತೆ ಬದಲಾವಣೆ

ಉಡುಪಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸರ್ಕಾರದಿಂದ ಕೈಗೊಳ್ಳಲಾಗುತ್ತಿದ್ದ ಕಾಮಗಾರಿಗಳಿಗೆ ಪಾವತಿಸಲಾಗುತ್ತಿದ್ದ ಕಾರ್ಮಿಕ ಕಲ್ಯಾಣ ಸುಂಕದ ಖಾತೆಯನ್ನು ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಖಜಾನೆ-2 ಮುಖಾಂತರ ಕಾರ್ಮಿಕ ಕಲ್ಯಾಣ ಸುಂಕವನ್ನು ಪಾವತಿ ಮಾಡುವ ಸುಂಕದಾರರು ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಲೆಕ್ಕ ಶೀರ್ಷಿಕೆ 8449-00- 120-0-18-660 ರಡಿಯಲ್ಲಿನ ಠೇವಣಿ ಖಾತೆ ಸಂಖ್ಯೆ: 26572ಇ181 ಮತ್ತು ಡಿ.ಡಿ.ಓ ಕೋಡ್ 997480 […]

ಕಾರ್ಮಿಕ ದಿನಾಚರಣೆ ಉಡುಗೊರೆ: ಕೆಎಸ್‌ಆರ್‌ಟಿಸಿಯ 7,200 ನೌಕರರ ವಿರುದ್ಧದ ಶಿಸ್ತು ಪ್ರಕರಣ ರದ್ದು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕಾರ್ಮಿಕ ದಿನದಂದು ತನ್ನ ಕಾರ್ಮಿಕರಿಗೆ ಉಡುಗೊರೆಯನ್ನು ನೀಡಿದೆ. ಸಂಸ್ಥೆಯ 7,200 ನೌಕರರ ವಿರುದ್ಧ ದಾಖಲಾಗಿದ್ದ ಶಿಸ್ತು ಪ್ರಕರಣಗಳನ್ನು ಒಂದೇ ಬಾರಿಗೆ ಅನ್ವಯಿಸುವಂತೆ ರದ್ದು ಮಾಡಿ ಆದೇಶ ಹೊರಡಿಸಿ ಇತಿಹಾಸ ನಿರ್ಮಿಸಿದೆ. ಕೆಎಸ್‌ಆರ್‌ಟಿಸಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್‌ ಈ ಆದೇಶವನ್ನು ಹೊರಡಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 10 ತಿಂಗಳಿಗಿಂತ ಕಡಿಮೆ ಅವಧಿಯ ಒಳಗಿನ ಗೈರು ಹಾಜರಿಯನ್ನು […]