ಕಚ್‌ನಲ್ಲಿ ಚಂಡಮಾರುತ ಆತಂಕ :3.5 ತೀವ್ರತೆಯ ಭೂಕಂಪನ
ಕಚ್ (ಗುಜರಾತ್): ರಕ್ಕಸ ಬಿಪರ್‌ಜೋಯ್ ಚಂಡಮಾರುತದ ಭೀತಿಯ ನಡುವೆಯೇ ಗುಜರಾತ್ನ ಕಚ್‌ನಲ್ಲಿ ಬುಧವಾರ ಭೂಕಂಪನ ಸಂಭವಿಸಿದೆ. ಗುಜರಾತ್ನ ಕಚ್‌ನಲ್ಲಿ ಚಂಡಮಾರುತದ ಆತಂಕದ ಮಧ್ಯೆ ಭೂಕಂಪದ ಭೀತಿ ಸೃಷ್ಟಿಯಾಗಿದೆ. ಇಂದು ಸಂಜೆ ಕಚ್ ಸಮೀಪ ಭಚೌ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ದಾಖಲಾಗಿದೆ. ಇಲ್ಲಿನ ಭಚೌ ಪ್ರದೇಶದ ಪಶ್ಚಿಮ – ನೈಋತ್ಯದ 5 ಕಿಲೋಮೀಟರ್ ದೂರದಲ್ಲಿ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಸಂಜೆ 5.15ರ ಸುಮಾರಿಗೆ […]